"ನಾನೂ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ" ಎಂದ ಕುಸ್ತಿಪಟು ವೀರೇಂದ್ರ ಸಿಂಗ್!

Update: 2023-12-23 13:14 GMT

 Photo: twitter.com/moliticsindia/

ಹೊಸದಿಲ್ಲಿ: ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಬೆಂಬಲಿಗರು ಉನ್ನತ ಹುದ್ದೆಗೆ ಬಂದ ನಂತರ ಕ್ರೀಡೆಯನ್ನು ತ್ಯಜಿಸುವುದಾಗಿ ಘೋಷಿಸಿದ ಸಹ ಅಥ್ಲೀಟ್ ಸಾಕ್ಷಿ ಮಲಿಕ್‌ಗೆ ಕುಸ್ತಿಪಟು ವೀರೇಂದ್ರ ಸಿಂಗ್ ಬೆಂಬಲ ನೀಡಿದ್ದಾರೆ. ಸಾಕ್ಷಿ ಮಲಿಕ್ ಮತ್ತು ಇತರ ಕ್ರೀಡಾಪಟುಗಳು ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

"ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿ ಜೀ, ನನ್ನ ಸಹೋದರಿ ಮತ್ತು ದೇಶದ ಪುತ್ರಿ, ನಿಮ್ಮ ಮಗಳು ಮತ್ತು ನನ್ನ ಸಹೋದರಿ ಸಾಕ್ಷಿ ಮಲಿಕ್ ಅವರ ಬಗ್ಗೆ ಹೆಮ್ಮೆಪಡುತ್ತೇನೆ, ಆದರೆ ನಾನು ದೇಶದ ಅಗ್ರ ಆಟಗಾರರಿಗೆ ಪದ್ಮಶ್ರೀಯನ್ನು ಹಿಂದಿರುಗಿಸುತ್ತೇನೆ," ಎಂದು ತನ್ನನ್ನು 'ಗೂಂಗಾ ಪೈಲ್ವಾನ್' ಎಂದು ಗುರುತಿಸಿಕೊಳ್ಳುವ ವೀರೇಂದ್ರ ಸಿಂಗ್, ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ನೀರಜ್ ಚೋಪ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ.

ಪದ್ಮಶ್ರೀ ಹಿಂದಿರುಗಿಸುವ ಬಜರಂಗ್ ಪುನಿಯಾ ಅವರ ನಿರ್ಧಾರದ ಬಳಿಕ ವೀರೇಂದ್ರ ಸಿಂಗ್ ಅವರು ಪಿಎಂ ಮೋದಿಗೆ ಪತ್ರ ಬರೆದಿದ್ದಾರೆ ಮತ್ತು ಅವರಿಗೆ ನೀಡಲಾದ ಪದ್ಮಶ್ರೀಯನ್ನು ಹಿಂದಿರುಗಿಸಲಿದ್ದಾರೆ.

ಹೊಸ WFI ಮುಖ್ಯಸ್ಥ ಸಂಜಯ್ ಸಿಂಗ್ ಅವರು 12 ವರ್ಷಗಳಿಂದ WFI ಮುಖ್ಯಸ್ಥರಾಗಿದ್ದ ಬ್ರಿಜ್ ಭೂಷಣ್ ಅವರ ದೀರ್ಘಕಾಲದ ಸಹಾಯಕರಾಗಿದ್ದಾರೆ. ಉತ್ತರ ಪ್ರದೇಶದಿಂದ ಆರು ಬಾರಿ ಬಿಜೆಪಿ ಸಂಸದರಾಗಿರುವ ಬ್ರಿಜ್ ಭೂಷಣ್ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಾಕ್ಷಿ ಮಲಿಕ್ ಸೇರಿದಂತೆ ಕುಸ್ತಿಪಟುಗಳು ಆರೋಪಿಸಿದ ನಂತರ ದೂರ ಫೆಡರೇಷನ್ ನಿಂದ ದೂರ ಸರಿಯಬೇಕಾಯಿತು.

ಈ ವರ್ಷದ ಜನವರಿಯಲ್ಲಿ, ಮೂವರು ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಸರಕಾರ ತನಿಖೆಗೆ ಆದೇಶ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು. ಬ್ರಿಜ್ ಭೂಷಣ್ ಅವರ ಯಾವುದೇ ಸಹಾಯಕ ಅಥವಾ ಸಂಬಂಧಿ ಕುಸ್ತಿ ಸಂಸ್ಥೆಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವುದಿಲ್ಲ ಎಂದು ಕುಸ್ತಿಪಟುಗಳಿಗೆ ಭರವಸೆ ನೀಡಲಾಗಿತ್ತು.

ಬ್ರಿಜ್ ಭೂಷಣ್ ಅವರ ಪುತ್ರ ಪ್ರತೀಕ್ ಮತ್ತು ಅಳಿಯ ವಿಶಾಲ್ ಸಿಂಗ್ ಸ್ಪರ್ಧೆಗೆ ಪ್ರವೇಶಿಸದಿದ್ದರೂ, ಅವರ ಸಹಾಯಕ ಸಂಜಯ್ ಸಿಂಗ್ ಅವರ ನಾಮಪತ್ರ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News