ಅಂಬೇಡ್ಕರ್‌ ಅವರಿಲ್ಲದೇ ಹೋಗಿದ್ದರೆ ನೆಹರೂ ಪರಿಶಿಷ್ಟರಿಗೆ ಮೀಸಲಾತಿ ಅನುಮತಿಸುತ್ತಿರಲಿಲ್ಲ: ಪ್ರಧಾನಿ ಮೋದಿ

Update: 2024-05-21 08:22 GMT

ಪ್ರಧಾನಿ ನರೇಂದ್ರ ಮೋದಿ (PTI)

ಬಿಹಾರ: ಪರಿಶಿಷ್ಟ ಜಾತಿ, ವರ್ಗಗಳು ಮತ್ತು ಹಿಂದುಳಿದ ವರ್ಗಗಳಿಂದ ಮೀಸಲಾತಿಗಳನ್ನು ಸೆಳೆದು “ಮತ ಜಿಹಾದ್”‌ನಲ್ಲಿ ತೊಡಗಿರುವವರಿಗೆ ಅವುಗಳನ್ನು ನೀಡಲು ಕಾಂಗ್ರೆಸ್‌ ಸಂವಿಧಾನವನ್ನು ಬದಲಾಯಿಸಲು ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಆರೋಪಿಸಿದ್ದಾರೆ.

“ಅಂಬೇಡ್ಕರ್‌ ಅವರಿಲ್ಲದೇ ಹೋಗುತ್ತಿದ್ದರೆ, ಎಸ್‌ಸಿ ಮತ್ತು ಎಸ್‌ಟಿಗಳಿಗೆ ಮೀಸಲಾತಿಗೆ ನೆಹರೂ ಅನುಮತಿಸುತ್ತಿರಲಿಲ್ಲ,” ಎಂದು ಅವರು ಹೇಳಿಕೊಂಡರು.

ಬಿಹಾರದ ಈಸ್ಟ್‌ ಚಂಪಾರಣ್‌ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಇಂಡಿಯಾ ಮೈತ್ರಿಕೂಟದ ವಿರುದ್ಧ ಕಿಡಿಕಾರಿದ್ದಾರೆ. ಈ ಮೈತ್ರಿಕೂಟ ಭ್ರಷ್ಟಾಚಾರ, ಓಲೈಕೆ ರಾಜಕಾರಣದಲ್ಲಿ ತೊಡಗಿದೆ ಮತ್ತು ಸನಾತನ ವಿರೋಧಿ ಧೋರಣೆಯನ್ನು ಹೊಂದಿದೆ ಮತ್ತು ʼಟುಕ್ಡೆ ಟುಕ್ಡೆʼ ಗ್ಯಾಂಗ್‌ ಅನ್ನು ಪ್ರತನಿಧಿಸುತ್ತದೆ ಎಂದು ಅವರು ಹೇಳಿದರಲ್ಲದೆ ಜೂನ್‌ 4ರಂದು ಲೋಕಸಭಾ ಚುನಾವಣೆ ಫಲಿತಾಂಶಗಳು ಪ್ರಕಟಗೊಂಡಾಗ ಈ ಮೈತ್ರಿಕೂಟಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದರು.

ರಾಹುಲ್‌ ಗಾಂಧಿ, ಅಖಿಲೇಶ್‌ ಯಾದವ್‌ ಮತ್ತು ತೇಜಸ್ವಿ ಯಾದವ್‌ ವಿರುದ್ಧ ಕಿಡಿಕಾರಿದ ಪ್ರಧಾನಿ, ಅವರು ಬೆಳ್ಳಿ ಚಮಚದೊಂದಿಗೆ ಹುಟ್ಟಿದವರು ಎಂದು ವ್ಯಂಗ್ಯವಾಡಿದರು.

ವಿಪಕ್ಷ ನಾಯಕರ ವಿರುದ್ಧ ಕಿಡಿಕಾರಿದ ಪ್ರಧಾನಿ, “ಭಾರತದ ಜನರು ಹಸಿವಿನಿಂದ ಬಳಲುತ್ತಿದ್ದಾಗ ಅವರು ಸ್ವಿಸ್‌ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುತ್ತಿದ್ದರು, ಬಡ ಕುಟುಂಬದಲ್ಲಿ ಹುಟ್ಟಿದ ನಾನು ಬಡತನವನ್ನು ಅರ್ಥಮಾಡಿಕೊಂಡಂತೆ ಅವರಿಗೆ ಜನಸಾಮಾನ್ಯರ ಕಷ್ಟ ಅರ್ಥವಾಗುವುದಿಲ್ಲ, ಎಂದು ಮೋದಿ ಹೇಳಿದರು.

ಕಳೆದ ವರ್ಷ ಲಾಲು ಪ್ರಸಾದ್‌ ಯಾದವ್‌ ಜೊತೆಗೆ ರಾಹುಲ್‌ ಗಾಂಧಿ ಭೋಜನ ಸವಿದ ಕುರಿತಂತೆ ಉಲ್ಲೇಖಿಸಿದ ಪ್ರಧಾನಿ “ರಾಮ ಮಂದಿರದ ಉದ್ಘಾಟನೆಯ ಆಹ್ವಾನವನ್ನು ತಿರಸ್ಕರಿಸಿದವರು ಭ್ರಷ್ಟರೊಂದಿಗೆ ಊಟ ಮಾಡುವುದರಲ್ಲಿ ಸಮಸ್ಯೆ ಹೊಂದಿಲ್ಲ” ಎಂದು ಮೋದಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News