ಪ್ರಕಾಶ್ ರಾಜ್ ಬಿಜೆಪಿ ಸೇರುತ್ತಾರೆಯೇ?: ವದಂತಿಗೆ ಬಹುಭಾಷಾ ನಟ ಪ್ರತಿಕ್ರಿಯಿಸಿದ್ದು ಹೀಗೆ...
Update: 2024-04-04 12:15 GMT
ಹೊಸದಿಲ್ಲಿ: ಮುಂಬರುವ ಲೋಕಸಭಾ ಚುನಾವಣೆಗೂ ಮುಂಚೆ ನಟ ಹಾಗೂ ಬಿಜೆಪಿಯ ಕಟುಟೀಕಾಕಾರರೆಂದೇ ಗುರುತಿಸಲ್ಪಡುವ ಪ್ರಕಾಶ್ ರಾಜ್ ಅವರು ಬಿಜೆಪಿ ಸೇರಲಿದ್ದಾರೆಂಬ ವದಂತಿಗಳ ನಂತರ ನಟ ಮೌನ ಮುರಿದು ಸ್ಪಷ್ಟೀಕರಣ ನೀಡಿದ್ದಾರೆ.
“ಪ್ರಕಾಶ್ ರಾಜ್ ಇಂದು ಅಪರಾಹ್ನ 3 ಗಂಟೆಗೆ ಬಿಜೆಪಿ ಸೇರಲು ಸಜ್ಜಾಗಿದ್ದಾರೆ,” ಎಂದು 2.56ಕ್ಕೆ ಒಬ್ಬರು ಟ್ವೀಟ್ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, “ ನನಗನಿಸುತ್ತೆ ಅವರು ಪ್ರಯತ್ನಿಸಿದ್ದರು; ಮತ್ತು ನನ್ನನ್ನು ಖರೀದಿಸಲು (ಸೈದ್ಧಾಂತಿಕವಾಗಿ) ಅವರು ಸಾಕಷ್ಟು ಶ್ರೀಮಂತರಲ್ಲ ಅಂತ ಅವರಿಗೆ ಅರ್ಥವಾಗಿರಬೇಕು, ಏನಂತೀರಿ ಗೆಳೆಯರೇ, ಜಸ್ಟ್ ಆಸ್ಕಿಂಗ್” ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
ತಾನು ಬಿಜೆಪಿ ಸೇರುತ್ತಿಲ್ಲ ಎಂದು ಪ್ರಕಾಶ್ ರಾಜ್ ಸ್ಪಷ್ಟೀಕರಣ ನೀಡಿದ್ದಾರೆ.