ಜಮ್ಮು-ಕಾಶ್ಮೀರ: ಭಾರದ ಹೃದಯದಿಂದ ಪುತ್ರ, ಹಿರಿಯ ಪೊಲೀಸ್ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಗುಲಾಮ್ ಹಸನ್ ಭಟ್

Update: 2023-09-14 08:06 GMT

Photo: Twitter@NDTV

ಹೊಸದಿಲ್ಲಿ: ಜಮ್ಮು-ಕಾಶ್ಮೀರದ ಪೋಲಿಸ್ ನ ನಿವೃತ್ತ ಇನ್ಸ್ ಪೆಕ್ಟರ್ ಜನರಲ್ ಗುಲಾಮ್ ಹಸನ್ ಭಟ್ ಅವರು ಬುಧವಾರ ಭಾರದ ಹೃದಯದೊಂದಿಗೆ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗಿನ ಎನ್ ಕೌಂಟರ್ ನಲ್ಲಿ ಕೊಲ್ಲಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿ 33 ವರ್ಷದ ಮಗ ಹಿಮಾಯುನ್ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಗುಲಾಮ್ ಹಸನ್ ಅವರು ಭಾರವಾದ ಹೆಜ್ಜೆ ಇಡುತ್ತಾ ಮಗನ ಮೃತದೇಹದತ್ತ ತೆರಳುವ ಹಾಗೂ ಅದರ ಮೇಲೆ ಹಾರವನ್ನು ಹಾಕುವ ವೀಡಿಯೊ ಹೃದಯ ಕಲಕುವಂತಿತ್ತು. ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದ ನಿವೃತ್ತ ಪೊಲೀಸ್ ಅಧಿಕಾರಿ  ಮಗನ ಅಂತಿಮ ದರ್ಶನ ಪಡೆದರು.

ಅನಂತನಾಗ್ ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ ಮೂವರು ಹಿರಿಯ ಭದ್ರತಾ ಅಧಿಕಾರಿಗಳಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ನ ಡಿಎಸ್ಪಿ ಹಿಮಾಯುನ್ ಭಟ್ ಸೇರಿದ್ದಾರೆ. ಇನ್ನೂ ನಡೆಯುತ್ತಿರುವ ಎನ್ ಕೌಂಟರ್‌ನಲ್ಲಿ ಚಂಡೀಗಢದ ಕರ್ನಲ್ ಮನ್‌ಪ್ರೀತ್ ಸಿಂಗ್ ಹಾಗೂ ಹರ್ಯಾಣದ ಮೇಜರ್ ಆಶಿಶ್ ಧೋನಾಕ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಹಿಮಾಯುನ್ ಗಂಭೀರ ಗಾಯಗೊಂಡಿದ್ದು, ಭಾರೀ ರಕ್ತಶ್ರಾವದಿಂದಾಗಿ ಸಾವನ್ನಪ್ಪಿದರು ಎಂದು ವರದಿಯಾಗಿದೆ.

ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸೇವೆಗೆ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ ಹಿಮಾಯುನ್ 2018 ರಲ್ಲಿ ಪೊಲೀಸ್ ಪಡೆಗೆ ಸೇರಿದರು. ಅವರ ಐದು ವರ್ಷಗಳ ಸೇವೆಯಲ್ಲಿ, ಅವರು ಹಲವಾರು ಕಷ್ಟಕರ ಕಾರ್ಯಾಚರಣೆಗಳನ್ನು ನಿರ್ವಹಿಸಿದ್ದರು, ಅವುಗಳಲ್ಲಿ ಹಲವು ವಿಶೇಷ ಕಾರ್ಯಾಚರಣೆಗಳ ಗುಂಪಿನ ಭಾಗವಾಗಿ, ಪ್ರತ್ಯೇಕವಾಗಿ ಭಯೋತ್ಪಾದನಾ-ವಿರೋಧಿ ಕಾರ್ಯಾಚರಣೆಗಳಲ್ಲಿ ಭಾಗಿಯಾಗಿದ್ದರು

ಬುಧವಾರ ಸಂಜೆ ಬದ್ಗಾಮ್ ನಲ್ಲಿ ಅಧಿಕಾರಿಯ ಅಂತಿಮ ವಿಧಿವಿಧಾನಗಳು ನಡೆದಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಾಗೂ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಅವರು ಪೊಲೀಸ್ ಅಧಿಕಾರಿಗೆ ಅಂತಿಮ ನಮನ ಸಲ್ಲಿಸಿದರು

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News