ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯ ಕುಮಾರ್ ಮೇಲೆ ಹಲ್ಲೆ

Update: 2024-05-17 17:50 GMT

Screengrab:X/@AbhishekSay

ಹೊಸದಿಲ್ಲಿ: ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಕನ್ಹಯ್ಯ ಕುಮಾರ್, ಶುಕ್ರವಾರ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸುವಾಗ ಅವರ ಮೇಲೆ ಹಲ್ಲೆ ನಡೆದಿದೆ. ಮಾಲಾರ್ಪಣೆ ಮಾಡುವ ನೆಪದಲ್ಲಿ ಅವರನ್ನು ಸಮೀಪಿಸಿರುವ ಕೆಲವು ದುಷ್ಕರ್ಮಿಗಳು, ನಂತರ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ವೈರಲ್‌ ಆಗಿದೆ.

ದುಷ್ಕರ್ಮಿಗಳು ಆಮ್ ಆದ್ಮಿ ಪಕ್ಷದ ಮಹಿಳಾ ಕೌನ್ಸಿಲರ್ ಛಾಯಾ ಗೌರವ್ ಶರ್ಮ ಅವರೊಂದಿಗೂ ಅನುಚಿತವಾಗಿ ವರ್ತಿಸಿದ್ದಾರೆ. ಈ ಘಟನೆಯ ಕುರಿತು ಅವರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

ನನ್ನ ಶಾಲನ್ನು ಕಸಿದುಕೊಳ್ಳಲಾಯಿತು ಹಾಗೂ ನನ್ನ ಪತಿಯನ್ನು ಬದಿಗೆ ಎಳೆದೊಯ್ದು, ಅವರನ್ನು ಬೆದರಿಸಲಾಯಿತು. ಗುಂಪಿನ ಮೇಲೆ ಕಪ್ಪು ಶಾಹಿ ಎರಚಲಾಯಿತು ಹಾಗೂ ಈ ಘಟನೆಯಲ್ಲಿ 3-4 ಮಹಿಳೆಯರು ಗಾಯಗೊಂಡರು ಎಂದು ತಮ್ಮ ದೂರಿನಲ್ಲಿ ಛಾಯಾ ಗೌರವ್ ಶರ್ಮ ಆರೋಪಿಸಿದ್ದಾರೆ.

ಪೊಲೀಸರ ಪ್ರಕಾರ, ಕನ್ಹಯ್ಯ ಕುಮಾರ್ ಅವರು ಕರ್ತಾರ್ ನಗರದಲ್ಲಿರುವ ಆಪ್ ಕಚೇರಿಯಲ್ಲಿ ಛಾಯಾ ಗೌರವ್ ಶರ್ಮ ಅವರೊಂದಿಗೆ ಸಭೆ ನಡೆಸಿ ಹೊರ ಬಂದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಘಟನೆಯ ಬೆನ್ನಿಗೇ ಹಲ್ಲೆಕೋರರದೆಂದು ಹೇಳಲಾಗಿರುವ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಆ ವಿಡಿಯೊದಲ್ಲಿ ಇಬ್ಬರು ವ್ಯಕ್ತಿಗಳು ಘಟನೆಯ ಹೊಣೆ ಹೊತ್ತುಕೊಂಡಿದ್ದಾರೆ.

ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾದ ಕನ್ಹಯ್ಯ ಕುಮಾರ್, ಬಿಜೆಪಿ ಅಭ್ಯರ್ಥಿಯಾದ ಮನೋಜ್ ತಿವಾರಿ ವಿರುದ್ಧ ಈಶಾನ್ಯ ದಿಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News