ಲ್ಯಾಪ್ ಟಾಪ್, ಕಂಪ್ಯೂಟರ್ ಆಮದನ್ನು ತಕ್ಷಣದಿಂದ ನಿರ್ಬಂಧಿಸಿದ ಕೇಂದ್ರ ಸರಕಾರ: ವರದಿ

Update: 2023-08-03 07:41 GMT

ಹೊಸದಿಲ್ಲಿ: ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶದಿಂದ ಭಾರತವು ಲ್ಯಾಪ್ ಟಾಪ್ ಗಳು, ಟ್ಯಾಬ್ಲೆಟ್ ಗಳು ಮತ್ತು ಪರ್ಸನಲ್ ಕಂಪ್ಯೂಟರ್ ಗಳ ಆಮದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಬಂಧಿಸಿದೆ ಎಂದು ಗುರುವಾರ ಸರಕಾರ ನೋಟಿಸ್ ನಲ್ಲಿ ತಿಳಿಸಿದೆ.

"ನಿರ್ಬಂಧಿತ ಆಮದುಗಳಿಗೆ ಮಾನ್ಯ ಪರವಾನಗಿಯ ಆಧಾರದಲ್ಲಿ ಅವುಗಳ ಆಮದನ್ನು ಅನುಮತಿಸಲಾಗುವುದು" ಎಂದು ನೋಟಿಸ್ ತಿಳಿಸಿದೆ

ಈ ಹೆಜ್ಜೆಯು ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವ  ಚೈತನ್ಯವಾಗಿದೆ" ಎಂದು ಎಲೆಕ್ಟ್ರಾನಿಕ್ಸ್ ಉದ್ಯಮ ಸಂಸ್ಥೆ ತಯಾರಕರ ಸಂಘದ ಮಾಹಿತಿ ತಂತ್ರಜ್ಞಾನದ ಮಾಜಿ ಮಹಾನಿರ್ದೇಶಕ ಅಲಿ ಅಖ್ತರ್ ಜಾಫ್ರಿ ಹೇಳಿದರು.

ಎಪ್ರಿಲ್-ಜೂನ್‌ನಲ್ಲಿ, ಲ್ಯಾಪ್‌ಟಾಪ್‌ ಗಳು, ಟ್ಯಾಬ್ಲೆಟ್‌ ಗಳು ಮತ್ತು ಪರ್ಸನಲ್ ಕಂಪ್ಯೂಟರ್‌ ಗಳನ್ನು ಒಳಗೊಂಡಿರುವ ಎಲೆಕ್ಟ್ರಾನಿಕ್ಸ್ ಆಮದುಗಳು 19.7 ಬಿಲಿಯನ್ ಆಗಿತ್ತು, ಇದು ವರ್ಷದಿಂದ ವರ್ಷಕ್ಕೆ 6.25% ಹೆಚ್ಚಾಗಿದೆ.

Dell, Acer, Samsung, LG, Panasonic, Apple Inc, Lenovo ಮತ್ತು HP Inc ಭಾರತದ ಮಾರುಕಟ್ಟೆಯಲ್ಲಿ ಲ್ಯಾಪ್‌ಟಾಪ್‌ಗಳನ್ನು ಮಾರಾಟ ಮಾಡುವ ಕೆಲವು ಪ್ರಮುಖ ಕಂಪನಿಗಳು ಹಾಗೂ  ಗಣನೀಯ ಭಾಗವನ್ನು ಚೀನಾದಂತಹ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News