ನಾಯಕತ್ವ ರಹಿತ ಬಾಂಗ್ಲಾ ಮಾಫಿಯಾ ಹಿಡಿತದಲ್ಲಿ: ಮಮತಾ
ಕೊಲ್ಕತ್ತಾ: ನಾಯಕತ್ವ ರಹಿತ ಬಾಂಗ್ಲಾದೇಶ ಇಂದು ದುರ್ಬಲ ಆಡಳಿತ ಹಾಗೂ ಮಾಫಿಯಾ ಹಿಡಿತದಲ್ಲಿ ಸಿಲುಕಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. ಬಾಂಗ್ಲಾದೇಶ ಜತೆ ಅತಿ ಉದ್ದದ ಗಡಿಯನ್ನು ಹಂಚಿಕೊಂಡಿರುವ ಬಂಗಾಳ, ಆ ದೇಶದ ರಾಜಕೀಯ ಮತ್ತು ಸಾಮಾಜಿಕ ಅಸ್ಥಿರತೆಯಿಂದಾಗಿ ಸದಾ ಅಪಾಯ ಸಾಧ್ಯತೆಯನ್ನು ಹೊಂದಿದೆ ಎಂದು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ಬಂಗಾಳ ಗಡಿಯಲ್ಲಿ ಗುಂಡಿನದಾಳಿ ಆರಂಭಿಸಿದರೆ ಬಿಹಾರ ಮತ್ತು ಒಡಿಶಾಗೆ ಕೂಡಾ ಅಪಾಯ ಇದೆ. ನಮ್ಮೊಂದಿಗೆ ಎಲ್ಲ ನೆರೆಹೊರೆಯವರು ಕೂಡಾ ಶಾಂತಿಯಿಂದ ಬದುಕಬೇಕು ಎನ್ನುವುದು ನನ್ನ ಬಯಕೆ" ಎಂದು ನ್ಯೂಸ್18 ಬಾಂಗ್ಲಾಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದರು. "ಪ್ರತಿಯೊಂದನ್ನೂ ರಕ್ಷಿಸಲು ಮತ್ತು ಪ್ರತಿಯೊಬ್ಬರೂ ಶಾಂತಿಯುತ ಜೀವನ ನಡೆಸಲು" ಅನುವಾಗುವಂತೆ ಬಾಂಗ್ಲಾದೇಶದ ಜತೆ ಮಾತುಕತೆ ಆರಂಭಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಭಾರತೀಯರನ್ನು ಸ್ಥಳಾಂತರಿಸಲು ಅನುವಾಗುವಂತೆ ಶಾಂತಿಪಾಲನಾ ಪಡೆಯನ್ನು ಕಳುಹಿಸುವಂತೆ ವಿಶ್ವಸಂಸ್ಥೆಗೆ ಮನವಿ ಮಾಡಿಕೊಳ್ಳುವಂತೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಇತ್ತೀಚೆಗೆ ಒತ್ತಾಯಿಸಿದ್ದರು. ದೇಶದ್ರೋಹ ಆರೋಪದ ಮೇಲೆ ಹಿಂದೂ ಧಾರ್ಮಿಕ ಮುಖಂಡ ಚಿನ್ಮಯ್ ದಾಸ್ ಅವರ ಬಂಧನದ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಇಸ್ಕಾನ್ ನಿಷೇಧಿಸುವಂತೆ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಮತಾ ಇಸ್ಕಾನ್ಗೆ ಬೆಂಬಲ ಸೂಚಿಸಿದರು.
ಎಲ್ಲ ಪ್ರತಿಕೂಲ ಪರಿಸ್ಥಿತಿಗಳ ಹೊರತಾಗಿಯೂ, ಬಾಂಗ್ಲಾದೇಶ ಈ ಸಂಕಷ್ಟದಿಂದ ಹೊರಬರಬೇPಕು ಎನ್ನುವುದು ತಮ್ಮ ಬಯಕೆ ಎಂದು ಸ್ಪಷ್ಟಪಡಿಸಿದರು. "ಬಂಗಾಳ ಬಾಂಗ್ಲಾದೇಶದ ಜತೆಗೆ ಸಮಾನ ಭಾಷೆ ಮತ್ತ ಸಂಸ್ಕøತಿಯನ್ನು ಹಂಚಿಕೊಂಡಿದೆ. ಭೌಗೋಳಿಕ ಗಡಿಗಳಿದ್ದರೂ, ಹೃದಯಗಳಿಗೆ ಗಡಿಗಳಿಲ್ಲ. ಯಾವುದೇ ರಾಜಕೀಯ ಒತ್ತಡಗಳಿದ್ದರೂ, ಪ್ರತೀಕಾರದ ಮಾತುಗಳು ಕೇಳಿಬರುತ್ತಿದ್ದರೂ, ಬಾಂಗ್ಲಾದೇಶ ಚೆನ್ನಾಗಿರಬೇಕು ಎನ್ನುವುದು ನನ್ನ ಬಯಕೆ" ಎಂದರು.