ಮಹಿಳಾ ನ್ಯಾಯಾಧೀಶರಿಗೆ ಜೀವ ಬೆದರಿಕೆ, ಪ್ರಕರಣ ದಾಖಲು

Update: 2024-04-03 15:16 GMT

ಲಕ್ನೋ : ಮಹಿಳಾ ನ್ಯಾಯಾಧೀಶರೋರ್ವರಿಗೆ ಜೀವ ಬೆದರಿಕೆಯೊಡ್ಡಲಾಗಿದ್ದು,ಬಂಡಾ ಪೋಲಿಸರು ಈ ಬಗ್ಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಜೀವ ಬೆದರಿಕೆ ಪತ್ರದ ಮೂಲದ ಬಗ್ಗೆ ಜಿಲ್ಲಾ ಪೋಲಿಸರು ಪರಿಶೀಲಿಸುತ್ತಿದ್ದಾರೆ.

ಇದು ಸದ್ರಿ ನ್ಯಾಯಾಧೀಶರಿಗೆ ಸಂಬಂಧಿಸಿದಂತೆ ಎರಡನೇ ಘಟನೆಯಾಗಿದೆ. ಅವರು ಕಳೆದ ವರ್ಷದ ಡಿಸೆಂಬರ್ನಲ್ಲಿ ಭಾರತದ ಮುಖ್ಯ ನ್ಯಾಯಾಧೀಶ (ಸಿಜೆಐ)ರಿಗೆ ಬರೆದಿದ್ದ ಬಹಿರಂಗ ಪತ್ರದಲ್ಲಿ ಹಿರಿಯ ಸಹೋದ್ಯೋಗಿಯಿಂದ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದರು. ಅವರು ದಯಾಮರಣಕ್ಕೆ ಅನುಮತಿಯನ್ನೂ ಕೋರಿದ್ದರು.

ಮಹಿಳಾ ನ್ಯಾಯಾಧೀಶರು ಮಾ.28ರಂದು ಜೀವ ಬೆದರಿಕೆ ಪತ್ರವನ್ನು ಸ್ವೀಕರಿಸಿದ್ದರು. ಮೂವರು ವ್ಯಕ್ತಿಗಳು ತನಗೆ ಈ ಪತ್ರವನ್ನು ಕಳುಹಿಸಿರಬಹುದು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಅಂಚೆ ಕಚೇರಿಯ ಸಿಸಿಟಿವಿ ಪರಿಶೀಲನೆಯು ಪತ್ರವನ್ನು ಯಾರು ಕಳುಹಿಸಿದ್ದರು ಎನ್ನುವುದನ್ನು ಸ್ಪಷ್ಟಪಡಿಸಬಹುದು ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News