ಶಿಂಧೆ ಬಣವನ್ನು 'ನಿಜವಾದ ಶಿವಸೇನೆʼ ಎಂದು ಘೋಷಿಸಿದ ಮಹಾರಾಷ್ಟ್ರ ಸ್ಪೀಕರ್ ನಾರ್ವೇಕರ್

Update: 2024-01-10 13:06 GMT

Photo : X/@mieknathshinde

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಸ್ಪೀಕರ್ ರಾಹುಲ್ ನಾರ್ವೇಕರ್ ಅವರು ಬುಧವಾರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ತೀರ್ಪು ನೀಡಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಶಿವಸೇನಾ ಪಕ್ಷದ ಎರಡೂ ಬಣಗಳು ಪಕ್ಷದಲ್ಲಿ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಪರಸ್ಪರ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿ ಬಣಗಳು ಅರ್ಜಿಗಳನ್ನು ಸಲ್ಲಿಸಿದ್ದವು. ಜೂನ್ 2022 ರಲ್ಲಿ ಶಿಂಧೆ ಮತ್ತು ಹಲವಾರು ಶಾಸಕರು ಆಗಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದರಿದ್ದರು. ಇದು ಶಿವಸೇನೆಯ ವಿಭಜನೆಗೆ ಕಾರಣವಾಯಿತು. ಶಿವಸೇನೆ, ಎನ್ ಸಿ ಪಿ, ಕಾಂಗ್ರೆಸ್ ಅನ್ನು ಒಳಗೊಂಡಿರುವ ಮಹಾ ವಿಕಾಸ್ ಅಘಾಡಿಯ ಪತನಕ್ಕೆ ಕಾರಣವಾಯಿತು.

ಜೂನ್ 2022 ರಲ್ಲಿ ಬಂಡಾಯದ ನಂತರ ಏಕನಾಥ ಶಿಂಧೆ ಅವರು ಭಾರತೀಯ ಜನತಾ ಪಕ್ಷದ ಬೆಂಬಲದೊಂದಿಗೆ ಸಿಎಂ ಆದರು. ಕಳೆದ ವರ್ಷ ಜುಲೈನಲ್ಲಿ ಎನ್ ಸಿ ಪಿ ಯ ಅಜಿತ್ ಪವಾರ್ ಬಣ ಅವರ ಸರ್ಕಾರಕ್ಕೆ ಸೇರ್ಪಡೆಗೊಂಡಿತು.

ತೀರ್ಪನ್ನು ಪ್ರಕಟಿಸಿದ ನಾರ್ವೇಕರ್ ಅವರು ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ರಾಜಕೀಯ ಪಕ್ಷ ಯಾರೆಂಬುದನ್ನು ಅವರು ಪ್ರಾಥಮಿಕವಾಗಿ ನಿರ್ಧರಿಸಿದ್ದಾರೆ ಎಂದು ಹೇಳಿದರು. ಎರಡು ಬಣಗಳು ಹುಟ್ಟಿಕೊಂಡಾಗ ಯಾವ ಬಣ ನಿಜವಾದ ರಾಜಕೀಯ ಪಕ್ಷ ಎಂದು ನಿರ್ಧರಿಸುವಾಗ ಅವರು ಶಿವಸೇನೆಯ ಸಂಬಂಧಿತ ಸಂವಿಧಾನ ಮತ್ತು ನಾಯಕತ್ವ ರಚನೆಯನ್ನು ಪರಿಗಣಿಸಲಾಯಿತು. ತಿದ್ದುಪಡಿ ಮಾಡಿದ ಸಂವಿಧಾನವನ್ನು ಪರಿಗಣಿಸುವ ಶಿವಸೇನೆಯ (UBT) ಬೇಡಿಕೆಯನ್ನು ಸ್ಪೀಕರ್ ತಿರಸ್ಕರಿಸಿ, 1999 ರ ಹಳೆಯ ಮತ್ತು ತಿದ್ದುಪಡಿ ಮಾಡದ ಸಂವಿಧಾನದ ಆಧಾರದ ಮೇಲೆ ಆದೇಶವನ್ನು ನೀಡಿದರು.

ಪಕ್ಷದ ಸಂವಿಧಾನದ ಬಗ್ಗೆ ಯಾವುದೇ ಒಮ್ಮತವನ್ನು ಭಾರತದ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿಲ್ಲ ಎಂದು ಸ್ಪೀಕರ್ ಹೇಳಿದರು. "ನಾಯಕತ್ವ ರಚನೆಯ ಬಗ್ಗೆ ಎರಡು ಪಕ್ಷಗಳು ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿವೆ. ಶಾಸಕಾಂಗ ಪಕ್ಷದಲ್ಲಿ ಬಹುಮತ ಇರುವುದು ಒಂದೇ ಅಂಶ. ವಿವಾದದ ಮೊದಲು ಅಸ್ತಿತ್ವದಲ್ಲಿದ್ದ ನಾಯಕತ್ವ ರಚನೆಯನ್ನು ಗಣನೆಗೆ ತೆಗೆದುಕೊಳ್ಳಬೇಕಾದ ಸಂಬಂಧಿತ ಸಂವಿಧಾನವನ್ನು ನಾನು ನಿರ್ಧರಿಸಬೇಕಾಗುತ್ತದೆ” ಎಂದರು.

ನಾಯಕತ್ವ ರಚನೆಯ ಕುರಿತು ಮಾತನಾಡಿದ ಸ್ಪೀಕರ್ ನಾರ್ವೇಕರ್, ಏಕನಾಥ್ ಶಿಂಧೆ ಅವರನ್ನು ಶಾಸಕಾಂಗ ಪಕ್ಷದ ನಾಯಕನ ಸ್ಥಾನದಿಂದ ತೆಗೆದುಹಾಕಲು ಉದ್ಧವ್ ಠಾಕ್ರೆ ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಹೇಳಿದರು. ಶಿಂಧೆ ಅವರ ನಿರ್ಧಾರಗಳು ಪಕ್ಷದೊಳಗಿನ ಭಿನ್ನಾಭಿಪ್ರಾಯವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News