'ಅಕ್ರಮ ವಲಸಿಗರ' ಬಯೋಮೆಟ್ರಿಕ್‌ ವಿವರಗಳನ್ನು ಸಂಗ್ರಹಿಸುವಂತೆ ಮಣಿಪುರ, ಮಿಝೋರಾಂ ರಾಜ್ಯಗಳಿಗೆ ಸೂಚಿಸಿದ್ದ ಕೇಂದ್ರ

Update: 2023-07-11 12:57 GMT

ಹೊಸದಿಲ್ಲಿ: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೇಳುವ ಎರಡು ದಿನಗಳಿಗೆ ಮುಂಚಿತವಾಗಿ ಕೇಂದ್ರ ಗೃಹ ಸಚಿವಾಲಯವು ಮಣಿಪುರ ಮತ್ತು ಮಿಝೋರಾಂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿ “ಅಕ್ರಮ ವಲಸಿಗರ” ಭೌಗೋಳಿಕ ಮತ್ತು ರೆಟಿನಾ, ಐರಿಸ್‌ ಮತ್ತ ಬೆರಳಚ್ಚು ಸೇರಿದಂತೆ ಬಯೋಮೆಟ್ರಿಕ್‌ ವಿವರಗಳನ್ನು ಸಂಗ್ರಹಿಸುವಂತೆ ಹೇಳಿತ್ತು ಎಂದು thehindu.com ವರದಿ ಮಾಡಿದೆ.

ಮಣಿಪುರ ಮತ್ತು ಮಿಝೋರಾಂ ರಾಜ್ಯಳೆರಡೂ ಮ್ಯಾನ್ಮಾರ್‌ನೊಂದಿಗೆ ಗಡಿ ಭಾಗ ಹೊಂದಿದ್ದು ಅಲ್ಲಿನ ದೌರ್ಜನ್ಯಕಾರಿ ಆಡಳಿತ ತಪ್ಪಿಸಿ ದೊಡ್ಡ ಸಂಖ್ಯೆಯಲ್ಲಿ ಭಾರತಕ್ಕೆ ಜನರು ವಲಸೆ ಬರಲು ಕಾರಣವಾಗಿದೆ.

ಎಪ್ರಿಲ್‌ 28ರಂದು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್‌ ಕುಮಾರ್‌ ಭಲ್ಲಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೇಲಿನ ನಿರ್ಧಾರ ಕೈಗೊಳ್ಳಲಾಗಿತ್ತು. ಜೂನ್‌ 22ರಂದು ಸಚಿವಾಲಯದಿಂದ ಎರಡೂ ರಾಜ್ಯಗಳಿಗೆ ಪತ್ರ ಹೋಗಿತ್ತಲ್ಲದೆ ಸೆಪ್ಟೆಂಬರ್‌ 30ರೊಳಗೆ ಕಾರ್ಯ ಮುಗಿಸುವಂತೆ ಸೂಚಿಸಲಾಗಿತ್ತು.

ಗೃಹ ಸಚಿವಾಲಯವು ಮೇ 2021ರಲ್ಲಿಯೇ ವಿದೇಶಗಳಿಂದ ಬಂದ ಅಕ್ರಮ ವಲಸಿಗರ ಕುರಿತಂತೆ ಕೆಲವೊಂದು ಸೂಚನೆಗಳನ್ನು ನೀಡಿತ್ತು. ಮತ್ತೆ ಇವುಗಳನ್ನು ಅಕ್ಟೋಬರ್‌ 2022ರಂದು ರಾಜ್ಯಗಳಿಗೆ ಕಳುಹಿಸಲಾಗಿತ್ತು.

ಆದರೆ ಕೇಂದ್ರದ ಇತ್ತೀಚಿನ ಜ್ಞಾಪನೆ ಬರುವ ವೇಳೆಗೆ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದು ಹಲವಾರು ಮಂದಿ ಬಲಿಯಾಗಿ ಸಾವಿರಾರು ಮಂದಿ ಮನೆಗಳನ್ನು ಕಳೆದುಕೊಳ್ಳುವಂತಾಗಿದೆ.

ಮಣಿಪುರದಲ್ಲಿನ ಹಿಂಸಾಚಾರಕ್ಕೆ ಮ್ಯಾನ್ಮಾರ್‌ನಿಂದ ಬಂದ ಅಕ್ರಮ ವಲಸಿಗರು ಕಾರಣ ಎಂದು ಮಣಿಪುರ ಮುಖ್ಯಮಂತ್ರಿ ಎನ್‌ ಬಿರೇನ್‌ ಸಿಂಗ್‌ ಇತ್ತೀಚೆಗೆ ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News