ಎಂಫಿಲ್ ರದ್ದುಗೊಂಡಿದೆ, ಅದಕ್ಕೆ ಮಾನ್ಯತೆಯಿಲ್ಲ: ಯುಜಿಸಿ

Update: 2023-12-28 05:33 GMT

ಹೊಸದಿಲ್ಲಿ: ವಿವಿಧ ವಿಶ್ವವಿದ್ಯಾಲಯಗಳಿಂದ ಮಾಸ್ಟರ್‌ ಆಫ್‌ ಫಿಲಾಸಫಿ ಅಥವಾ ಎಂಫಿಲ್‌ ಕೋರ್ಸುಗಳನ್ನು ಕೈಗೊಳ್ಳುವ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಎಚ್ಚರಿಕೆ ನೀಡಿದ್ದು ಈ ಎಂಎಫಿಲ್‌ ಕೋರ್ಸ್‌ ಅನ್ನು ಈಗಾಗಲೇ ರದ್ದುಗೊಳಿಸಿರುವುದಾಗಿ ತಿಳಿಸಿದೆ. ರದ್ದುಗೊಂಡ ಹೊರತಾಗಿಯೂ ಕೆಲವು ವಿವಿಗಳು ಈ ಕೋರ್ಸುಗಳನ್ನು ನಡೆಸುತ್ತಿವೆ ಎಂಬುದನ್ನು ಯುಜಿಸಿ ಗಂಭೀರವಾಗಿ ಪರಿಗಣಿಸಿದೆ.

ಎಂಫಿಲ್‌ ಕೋರ್ಸುಗಳನ್ನು ನಿಲ್ಲಿಸುವಂತೆ ಯುಜಿಸಿ ಈಗಾಗಲೇ ವಿವಿಗಳಿಗೆ ಸೂಚಿಸಿದೆಯಲ್ಲದೆ ಶೈಕ್ಷಣಿಕ ವರ್ಷ 2023-24ರಲ್ಲಿ ಈ ಕೋರ್ಸಿಗಾಗಿ ಪ್ರವೇಶಾತಿಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿತ್ತು.

ಇನ್ನು ಮುಂದೆ ಎಂಫಿಲ್‌ ಒಂದು ಮಾನ್ಯತೆ ಪಡೆದ ಪದವಿಯಲ್ಲ ಎಂದು ಯುಜಿಸಿ ಹೇಳಿದೆ. ಯುಜಿಸಿ (ಪಿಎಚ್‌ಡಿ ಪದವಿ ನೀಡಲು ಕನಿಷ್ಠ ಮಾನದಂಡಗಳು ಮತ್ತು ಪ್ರಕ್ರಿಯೆಗಳು) ನಿಬಂಧನೆಗಳು 2022 ಇದರ ನಿಯಮ 14 ಎಂಫಿಲ್‌ ಕೋರ್ಸುಗಳನ್ನು ಕೈಗೊಳ್ಳುವುದನ್ನು ನಿಷೇಧಿಸಿದೆ ಎಂದು ಯುಜಿಸಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News