ಲೋಕಸಭಾ ಚುನಾವಣೆ 2024 | INDIA ಒಕ್ಕೂಟ ಸೇರಿದರೆ ನಿತೀಶ್‌ ಗೆ ಉಪಪ್ರಧಾನಿ ಪಟ್ಟ ಆಫರ್‌?

Update: 2024-06-04 17:03 GMT
Live Updates - Page 2
2024-06-04 12:20 GMT

ದಿಲ್ಲಿಯ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ಆರಂಭ. ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ಜೈರಾಂ ರಮೇಶ್‌ ಭಾಗಿ 

2024-06-04 12:13 GMT

ಪಟಿಯಾಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮವೀರ್‌ ಗಾಂಧಿ ಅವರು ಎಎಪಿಯ ಬಲ್ಬೀರ್ ಸಿಂಗ್ ಅವರನ್ನು ಸೋಲಿಸಿದ್ದಾರೆ

2024-06-04 12:11 GMT

ಬಿಜೆಪಿಯ ಮನ್ಸುಖ್ ಭಾಯಿ ಧಂಜಿನ್ ಭಾಯ್ ವಾಸವಾ ಅವರಿಗೆ ಗುಜರಾತ್‌ನ ಭರೂಚ್ ಲೋಕಸಭಾ ಕ್ಷೇತ್ರದಲ್ಲಿ 85696 ಮತಗಳಿಂದ ಜಯ

2024-06-04 12:09 GMT

ಆಝಾದ್ ಸಮಾಜವಾದಿ ಪಕ್ಷ(ಕಾನ್ಶಿ ರಾಮ್)ದ ನಾಯಕ ಚಂದ್ರಶೇಖರ್ ಆಝಾದ್ ಅವರಿಗೆ 151473 ಮತಗಳಿಂದ ಉತ್ತರಪ್ರದೇಶದ ನಗೀನಾ ಕ್ಷೇತ್ರದಲ್ಲಿ ಜಯ

2024-06-04 11:55 GMT

ರೈತರ ಮೇಲೆ ವಾಹನ ಹರಿಸಿದ ಅಶೀಶ್ ಮಿಶ್ರಾನ ತಂದೆ ಅಜಯ್ ಮಿಶ್ರಾ ಟೇನಿಗೆ ಉತ್ತರಪ್ರದೇಶದ ಲಖಿಂಪುರ ಖೇರಿ ಲೋಕಸಭಾ ಕ್ಷೇತ್ರದಲ್ಲಿ ಸೋಲು

2024-06-04 11:49 GMT

ಪಂಜಾಬ್‌ನ ಪಟಿಯಾಲದಿಂದ ಕಾಂಗ್ರೆಸ್‌ ನ  ಡಾ.ಧರ್ಮವೀರ್ ಗಾಂಧಿಗೆ 14831 ಮತಗಳ ಅಂತರದಿಂದ ಗೆಲುವು

2024-06-04 11:47 GMT

ಗುಜರಾತ್‌ ನಲ್ಲಿ ದಶಕಗಳ ಬಳಿಕ ಖಾತೆ ತೆರೆದ ಕಾಂಗ್ರೆಸ್‌

ಕಾಂಗ್ರೆಸ್‌ನ ಜೆನಿಬೆನ್ ಠಾಕೂರ್‌ ಅವರು ಗುಜರಾತ್‌ನ ಬನಸ್ಕಾಂತ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರೇಖಾ ಚೌಧರಿ ಅವರನ್ನು 30,000 ಮತಗಳಿಂದ ಸೋಲಿಸಿದ್ದಾರೆ.

2024-06-04 11:45 GMT

ಇಂದಿರಾಗಾಂಧಿ ಹಂತಕನ ಮಗ ಸರಬ್ಜೀತ್ ಸಿಂಗ್ ಖಾಲ್ಸಾ, ಪ್ರತ್ಯೇಕವಾದಿ ನಾಯಕ ಅಮೃತಪಾಲ್ ಸಿಂಗ್ ಗೆಲುವಿನತ್ತ

ಚಂಡೀಗಢ: ಪ್ರತ್ಯೇಕವಾದಿ ನಾಯಕ ಅಮೃತಪಾಲ್ ಸಿಂಗ್ ಮತ್ತು ಪ್ರಧಾನಿ ಇಂದಿರಾ ಗಾಂಧಿ ಹಂತಕನ ಪುತ್ರ ಸರಬ್ಜೀತ್ ಸಿಂಗ್ ಖಾಲ್ಸಾ ಅವರು ಸಂಸತ್ತಿಗೆ ಚೊಚ್ಚಲ ಪ್ರವೇಶ ಮಾಡಲಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಸಿಂಗ್ ಮತ್ತು ಖಾಲ್ಸಾ ಇಬ್ಬರೂ ತಮ್ಮ ಸಮೀಪದ ಪ್ರತಿಸ್ಪರ್ಧಿಗಳ ವಿರುದ್ಧ ಕ್ರಮವಾಗಿ ಖದೂರ್ ಸಾಹಿಬ್ ಮತ್ತು ಫರೀದ್ಕೋಟ್ ಲೋಕಸಭಾ ಕ್ಷೇತ್ರಗಳಿಂದ ಕಣಕ್ಕಿಳಿದಿದ್ದರು.

ಒಂದು ವರ್ಷದ ಹಿಂದೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಅಡಿಯಲ್ಲಿ ಅಮೃತಪಾಲ್ ಸಿಂಗ್ ಅವರನ್ನು ಅಸ್ಸಾಂನ ಜೈಲಿನಲ್ಲಿ ಇರಿಸಲಾಗಿದೆ.

2024-06-04 11:44 GMT

ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ 1,52,513 ಮತಗಳ ಅಂತರದಲ್ಲಿ ಜಯ 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News