ನೀಟ್ ಹಗರಣ | ಪರೀಕ್ಷಾ ಯೋಧ ಮೋದಿಯವರು ಯುವಕರ ಭವಿಷ್ಯದ ಮೇಲೆ ಯುದ್ಧ ಸಾರಿದ್ದಾರೆ : ಅಸದುದ್ದೀನ್ ಉವೈಸಿ ವ್ಯಂಗ್ಯ

Update: 2024-06-23 14:28 GMT

ಅಸದುದ್ದೀನ್ ಉವೈಸಿ | PC : PTI 

ಹೈದರಾಬಾದ್: ಪರೀಕ್ಷಾ ಯೋಧ ಮೋದಿಯವರು ಯುವಕರ ಭವಿಷ್ಯದ ಮೇಲೆ ಯುದ್ಧ ಸಾರಿದ್ದಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವ್ಯಂಗ್ಯವಾಡಿದ್ದಾರೆ.

ನೀಟ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಯ ಆಯೋಜನೆಯಲ್ಲಿನ ಲೋಪದ ಕುರಿತು ಕೇಂದ್ರ ಎನ್‌ ಡಿ ಎ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಅಸದುದ್ದೀನ್ ಉವೈಸಿ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ಯುವಕರ ಕ್ಷಮೆ ಯಾಚಿಸಬೇಕು. ಯುವಕರು ಸರಕಾರದಿಂದ ನ್ಯಾಯ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಉವೈಸಿ, “ಮೊದಲು ಸುಮಾರು 23 ಲಕ್ಷ ಪರೀಕ್ಷಾರ್ಥಿಗಳ ನೀಟ್-ಯುಜಿ ಪರೀಕ್ಷೆ, ನಂತರ ಸುಮಾರು 9 ಲಕ್ಷ ಪರೀಕ್ಷಾರ್ಥಿಗಳ ಯುಜಿಸಿ-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಇದೀಗ ಸುಮಾರು 2 ಲಕ್ಷ ಪರೀಕ್ಷಾರ್ಥಿಗಳ ಸಿಎಸ್ಐಆರ್-ನೆಟ್ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಹಾಗೆಯೇ ಸುಮಾರು 2 ಲಕ್ಷ ಪರೀಕ್ಷಾರ್ಥಿಗಳ ನೀಟ್-ಪಿಜಿ ಪರೀಕ್ಷೆಯನ್ನು ಪರೀಕ್ಷೆಗೆ ಇನ್ನು ಒಂದು ದಿನ ಬಾಕಿ ಇರುವಾಗ ರಾತ್ರೋರಾತ್ರಿ ರದ್ದುಗೊಳಿಸಲಾಗಿದೆ. ಇದರ ಹೊಣೆಗಾರಿಕೆಯು ಪ್ರಧಾನಿ ಮೋದಿ ಹಾಗೂ ಸಚಿವರ ಮೇಲಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News