ವಯನಾಡ್ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 156ಕ್ಕೆ ಏರಿಕೆ

Update: 2024-07-31 05:50 GMT

ವಯನಾಡ್: ರಕ್ಷಣಾ ಕಾರ್ಯಾಚರಣೆ ಮುಂದುವರಿದಂತೆ ಹೃದಯವಿದ್ರಾವಕ ದೃಶ್ಯಗಳು ಅನಾವರಣಗೊಳ್ಳುತ್ತಿದ್ದು, ಈ ದುರಂತದಲ್ಲಿ ಕಾಣೆಯಾಗಿರುವವರ ಸಂಖ್ಯೆಯನ್ನು ನಿರ್ಧರಿಸಲು ಬುಧವಾರ ವಯನಾಡ್ ನ ಜಿಲ್ಲಾಡಳಿತವು ದತ್ತಾಂಶ ಸಂಗ್ರಹಕ್ಕೆ ಚಾಲನೆ ನೀಡಿದೆ. ಈ ದುರಂತದಲ್ಲಿ ನಾಪತ್ತೆಯಾಗಿರುವವರ ಪತ್ತೆಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ತೊಂದರೆಗೀಡಾಗಿರುವ ಸ್ಥಳಗಳಲ್ಲಿ ಗಾಯಗೊಂಡಿರುವವರನ್ನು ಏರ್ ಲಿಫ್ಟ್ ಮಾಡಲು ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತದೆ ಎಂದು ವರದಿಯಾಗಿದೆ.

ಈ ದುರ್ಘಟನೆಯಲ್ಲಿ ತಮ್ಮ ಪ್ರೀತಿ ಪಾತ್ರರು ಇನ್ನೂ ಪತ್ತೆಯಾಗಿಲ್ಲ ಎಂದು ಹಲವಾರು ಕುಟುಂಬಗಳ ಸದಸ್ಯರು ವರದಿ ಮಾಡಿದ್ದಾರೆ. ವಯನಾಡ್ ನಲ್ಲಿ 45 ಪರಿಹಾರ ಶಿಬಿರಗಳನ್ನು ನಿರ್ಮಾಣ ಮಾಡಲಾಗಿದ್ದು, 3,069 ಮಂದಿಗೆ ಆಶ್ರಯ ಒದಗಿಸಲಾಗಿದೆ. ಈ ನಡುವೆ, ಹಲವಾರು ರಕ್ಷಣಾ ಸಂಸ್ಥೆಗಳು ಇಂದು ಬೆಳಗ್ಗೆ ಈ ದುರಂತದಲ್ಲಿ ಮಣ್ಣಿನಡಿ ಸಿಲುಕಿಕೊಂಡಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಲು ತಮ್ಮ ರಕ್ಷಣಾ ಕಾರ್ಯಾಚರಣೆಯನ್ನು ಪುನಾರಂಭಿಸಿವೆ. ಈ ದುರ್ಘಟನೆಯಲ್ಲಿ ಈವರೆಗೆ 156 ಮಂದಿ ಮೃತಪಟ್ಟಿದ್ದು, 197 ಮಂದಿ ಗಾಯಗೊಂಡಿದ್ದಾರೆ.

ಜುಲೈ 30 ಹಾಗೂ 31ರಂದು ಕೇರಳ ಸರಕಾರವು ರಾಜ್ಯವ್ಯಾಪಿ ಶೋಕಾಚರಣೆಯನ್ನು ಘೋಷಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೃತ ಕುಟುಂಬದ ಸದಸ್ಯರಿಗೆ ರೂ. 2 ಲಕ್ಷ ಹಾಗೂ ಗಾಯಗೊಂಡಿರುವವರಿಗೆ ರೂ. 50,000 ಪರಿಹಾರವನ್ನು ಘೋಷಿಸಿದ್ದಾರೆ.

ನಾಗರಿಕರ ಕುಂದುಕೊರತೆಗಳನ್ನು ಆಲಿಸಲು ಕೇರಳ ಸರಕಾರವು ಎರಡು ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಿದೆ. (9656938689 - 8086010833).

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News