6 ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ

Update: 2024-09-15 17:24 GMT

PC : PTI 

ರಾಂಚಿ : ಪ್ರಧಾನಿ ನರೇಂದ್ರ ಮೋದಿ ಅವರು ಜಾರ್ಖಂಡ್, ಒರಿಶಾ, ಬಿಹಾರ್, ಉತ್ತರಪ್ರದೇಶದ 6 ರೈಲುಗಳನ್ನು ರಾಂಚಿಯಲ್ಲಿ ರವಿವಾರ ಆನ್‌ಲೈನ್ ಮೂಲಕ ಲೋಕಾರ್ಪಣೆಗೊಳಿಸಿದರು.

ಹೊಸ ರೈಲುಗಳು ಟಾಟಾನಗರ್-ಪಾಟ್ನಾ, ಬ್ರಹ್ಮಪುರ-ಟಾಟಾನಗರ್, ರೂರ್ಕೆಲಾ-ಹೌರಾಹ್, ದಿಯೋಗಢ-ವಾರಣಾಸಿ, ಭಾಗಲ್ಪುರ-ಹೌರಾಹ್, ಗಯಾ-ಹೌರಾಹ್ ಮಾರ್ಗಗಳಲ್ಲಿ ಸಂಚರಿಸಲಿದೆ.

ಪ್ರಧಾನಿ ಅವರು ಈ ರೈಲುಗಳಿಗೆ ಟಾಟಾ ನಗರದಲ್ಲಿ ಹಸಿರು ನಿಶಾನೆ ತೋರಿಸಲು ನಿಗದಿಯಾಗಿತ್ತು. ಆದರೆ, ದುರ್ಬಲ ದೃಗ್ಗೋಚರದ ಹಿನ್ನೆಲೆಯಲ್ಲಿ ಅವರ ಹೆಲಿಕಾಪ್ಟರ್ ಟೇಕ್‌ಆಫ್ ಆಗಿರಲಿಲ್ಲ.

ಟಾಟಾನಗರ್ ನಿಲ್ದಾಣದಲ್ಲಿ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಜಾರ್ಖಂಡ್‌ನ ರಾಜ್ಯಪಾಲ ಸಂತೋಷ್ ಕುಮಾರ್ ಗಂಗ್ವಾರ್ ಉಪಸ್ಥಿತರಿದ್ದರು.

ಈ ರೈಲುಗಳು ವೇಗದ ಸಂಪರ್ಕ ಒದಗಿಸಲಿದೆ ಎಂದು ಪ್ರಧಾನಿ ಅವರ ಕಚೇರಿ ಹೇಳಿಕೆ ತಿಳಿಸಿದೆ.

► ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಕಲ್ಲೆಸೆತ ; ಐವರ ಬಂಧನ

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹಸಿರು ನಿಶಾನೆ ತೋರಿಸಲಿದ್ದ ದುರ್ಗ್-ವಿಶಾಖಪಟ್ಟಣ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚತ್ತೀಸ್‌ಗಢದ ಮಹಾಸಮುಂದ್‌ನಲ್ಲಿ ಪರೀಕ್ಷಾರ್ಥ ಸಂಚರಿಸುತ್ತಿದ್ದ ಸಂದರ್ಭ ಅದರ 3 ಬೋಗಿಗಳಿಗೆ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ. ಇದರಿಂದ ಕಿಟಕಿಯ ಗಾಜುಗಳು ಹಾನಿಗೀಡಾಗಿವೆ. ಘಟನೆಗೆ ಸಂಬಂಧಿಸಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News