ಶೀಘ್ರದಲ್ಲೇ ಪಂಚ ರಾಜ್ಯಗಳಿಗೆ ಚುನಾವಣೆ ಘೋಷಣೆ ಸಾಧ್ಯತೆ

Update: 2023-10-06 10:41 GMT

ಸಾಂದರ್ಭಿಕ ಚಿತ್ರ (PTI) 

ಹೊಸ ದಿಲ್ಲಿ: ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ತೆಲಂಗಾಣ ಹಾಗೂ ಮಿಝೋರಾಂ ಸೇರಿದಂತೆ ಪಂಚ ರಾಜ್ಯಗಳಿಗೆ ಅಕ್ಟೋಬರ್ 8ರಿಂದ 10ರ ನಡುವೆ ರಾಜ್ಯ ವಿಧಾನಸಭಾ ಚುನಾವಣೆಗಳು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಚುನಾವಣಾ ಆಯೋಗದ ಮೂಲಗಳು ತಿಳಿಸಿದೆ ಎಂದು India Today ವರದಿ ಮಾಡಿದೆ.

ಈ ರಾಜ್ಯಗಳಿಗೆ ನವೆಂಬರ್ ಎರಡನೇ ವಾರದಿಂದ ಡಿಸೆಂಬರ್ ಮೊದಲ ವಾರದ ನಡುವೆ ಮತದಾನ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

2018ರಲ್ಲಿಯಂತೆ ಈ ಬಾರಿಯೂ ರಾಜಸ್ಥಾನ, ಮಧ್ಯಪ್ರದೇಶ, ಮಿಝೋರಾಂ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಹಾಗೆಯೇ, 2018ರಲ್ಲಿಯಂತೆಯೇ ಈ ಬಾರಿಯೂ ಛತ್ತೀಸ್ ಗಢ ರಾಜ್ಯದಲ್ಲಿ ಎರಡು ಹಂತದ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದೂ ಅವು ಹೇಳಿವೆ.

ಆದರೆ, ಎಲ್ಲ ಐದು ರಾಜ್ಯಗಳ ಮತದಾನದ ದಿನಾಂಕವು ಬೇರೆ ಬೇರೆಯಾಗಿರಲಿದೆ.

ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಮಿಝೋರಾಂನಲ್ಲಿ ಮಿಝೋ ನ್ಯಾಶನಲ್ ಫ್ರಂಟ್ ನೇತೃತ್ವದ ಸರ್ಕಾರ ಅಸ್ತಿತ್ವದಲ್ಲಿದ್ದರೆ, ತೆಲಂಗಾಣ, ಮಧ್ಯಪ್ರದೇಶ ರಾಜ್ಯಗಳಲ್ಲಿ ಕ್ರಮವಾಗಿ ಕೆ.ಚಂದ್ರಶೇಖರ್ ರಾವ್ ನೇತೃತ್ವದ BRS ಹಾಗೂ ಬಿಜೆಪಿ ಸರ್ಕಾರ, ರಾಜಸ್ಥಾನ ಹಾಗೂ ಛತ್ತೀಸ್ ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವದಲ್ಲಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News