ರಾಮಮಂದಿರ ಉದ್ಘಾಟನೆಗೆ 11 ದಿನ ಉಪವಾಸ ಆರಂಭಿಸಿದ ಪ್ರಧಾನಿ ಮೋದಿ

Update: 2024-01-13 03:45 GMT

Photo: twitter.com/narendramodi

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರದ ಉದ್ಘಾಟನೆಗೆ ಸಜ್ಜಾಗುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ 11 ದಿನಗಳ ಉಪವಾಸ ವ್ರತ ಆರಂಭಿಸಿದ್ದಾರೆ.

"ನಮ್ಮ ಶಾಸ್ತ್ರ ಪುರಾಣಗಳಲ್ಲಿ ಹೇಳಿದಂತೆ ಯಾಗ ಮತ್ತು ದೇವರ ಆರಾಧನೆಗೆ ನಮ್ಮಲ್ಲಿ ಪವಿತ್ರ ಅತ್ಮಸಾಕ್ಷಿಯನ್ನು ಉದ್ದೀಪನಗೊಳಿಸಿಕೊಳ್ಳಬೇಕು. ಇದಕ್ಕಾಗಿ ಉಪವಾಸ ಮತ್ತು ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಶಾಸ್ತ್ರಗಳು ನಿರ್ದಿಷ್ಟಪಡಿಸಿವೆ. ಪ್ರಾಣ ಪ್ರತಿಷ್ಠೆಗೆ ಮುನ್ನ ಇವುಗಳನ್ನು ಅನುಸರಿಸಬೇಕು" ಎಂದು ಅವರು ಹೇಳಿದ್ದಾರೆ.

ಇದನ್ನು ಭಗವಂತನ ಅನುಗ್ರಹ ಎಂದು ಬಣ್ಣಿಸಿರುವ ಅವರು,"ನನ್ನಲ್ಲಿ ಭಾವನೆಗಳು ಉಕ್ಕುತ್ತಿವೆ. ಭಕ್ತಿಯ ವಿಭಿನ್ನ ಭಾವ ಅನುಭವಕ್ಕೆ ಬರುತ್ತಿದೆ. ಇದು ನನ್ನ ಅಂತರಾತ್ಮದ ಭಾವನಾತ್ಮಕ ಪಯಣ, ಅಭಿವ್ಯಕ್ತಿಯ ಅವಕಾಶವಲ್ಲ. ಈ ಅನುಭೂತಿಯ ಆಳ, ವಿಸ್ತಾರ ಮತ್ತು ತೀವ್ರತೆಯನ್ನು ಹೇಳಲು ಪದಗಳು ಸಾಲುತ್ತಿಲ್ಲ" ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News