ಗಾಝಿಯಾಬಾದ್ ಗೆ ಗಜನಗರ ಅಥವಾ ಹರನಂದಿ ನಗರ ಎಂದು ಮರುನಾಮಕರಣ?

Update: 2024-01-09 03:04 GMT

ಗಾಜಿಯಾಬಾದ್ ನಗರ Photo: wikipedia.org/wiki/Ghaziabad

ಲಕ್ನೋ: ಗಾಝಿಯಾಬಾದ್ ನಗರದ ಹೆಸರು ಬದಲಾಯಿಸುವಂತೆ ಒತ್ತಾಯಿಸುತ್ತಿದ್ದ ಹಿಂದೂ ಸಂಘಟನೆಗಳ ಆಗ್ರಹವನ್ನು ಪರಿಗಣಿಸಿರುವ ಗಾಜಿಯಾಬಾದ್ ಪಾಲಿಕೆ ಮಂಗಳವಾರ ಮೊಟ್ಟಮೊದಲ ಬಾರಿಗೆ ಹೆಸರು ಬದಲಾವಣೆಯ ಪ್ರಸ್ತಾವವನ್ನು ಸಭೆಯ ಕಾರ್ಯಸೂಚಿಯಲ್ಲಿ ಪ್ರಕಟಿಸಿದೆ. ನಗರಕ್ಕೆ ಗಜನಗರ ಅಥವಾ ಹರನಂದಿ ನಗರ ಎಂಬ ಹೆಸರುಗಳ ಪೈಕಿ ಒಂದನ್ನು ಆಯ್ಕೆ ಮಾಡಲು ಅವಕಾಶ ನೀಡಲಾಗಿದೆ.

ಈ ಎನ್ ಸಿಆರ್ ಜಿಲ್ಲೆಯ ಮರುನಾಮಕರಣ ಪ್ರಸ್ತಾವವನ್ನು ಬಿಜೆಪಿ ಪಾಲಿಕೆ ಸದಸ್ಯ ಮಂಡಿಸಿದ್ದು, ಮರುನಾಮಕರಣದ ಪರ ವಾತಾವರಣ ಇರುವ ಹಿನ್ನೆಲೆಯಲ್ಲಿ ಇದನ್ನು ಕಾರ್ಯಸೂಚಿಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.

ಗಾಜಿಯಾಬಾದ್ ಮರುನಾಮಕರಣದ ಪ್ರಸ್ತಾವದ ಬಗ್ಗೆ ಪ್ರತಿಕ್ರಿಸಿದ ಮೇಯರ್ ಸುನೀತಾ ದಯಾಳ್, ಹಲವು ಕಾಲದಿಂದ ಮರು ನಾಮಕರಣಕ್ಕೆ ಮನವಿ ಮಾಡಲಾಗಿತ್ತು. ಆದರೆ ಇದೇ ಮೊದಲ ಬಾರಿಗೆ ಕಾರ್ಯಕಾರಿ ಹಂತದಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಅಲಹಾಬಾದ್ ನಗರವನ್ನು 2018ರಲ್ಲಿ ಪ್ರಯಾಗ್ರಾಜ್ ಎಂದು ಮರುನಾಮಕರಣ ಮಾಡಿದ ದಿನದಿಂದಲೂ ಗಾಜಿಯಾಬಾದ್ ಹೆಸರು ಕೂಡಾ ಬದಲಿಸಬೇಕು ಎಂಬ ಆಗ್ರಹ ಕೇಳಿಬಂದಿತ್ತು. 100ನೇ ವಾರ್ಡ್ ಪಾಲಿಕೆ ಸದಸ್ಯ ಸಂಜಯ್ ಸಿಂಗ್ ಈ ಪ್ರಸ್ತಾವವನ್ನು ಮಂಡಿಸಿದ್ದು, ಪಾಲಿಕೆಯಲ್ಲಿ ಬಿಜೆಪಿ ಬಹುಮತ ಹೊಂದಿದೆ.

"ಆಡಳಿತ ಸಮಿತಿ ನನ್ನ ಪ್ರಸ್ತಾವನೆಯನ್ನು ಸ್ವೀಕರಿಸಿದ್ದು, ಮಂಗಳವಾರ ಚರ್ಚೆ ನಡೆಯಲಿದೆ. ನಾನು ಗಜನಗರ ಮತ್ತು ಹರನಂದಿ ನಗರ ಎಂಬ ಎರಡು ಹೆಸರುಗಳನ್ನು ಪ್ರಸ್ತಾವಿಸಿದ್ದೇನೆ. ಗಾಜಿಯಾಬಾದ್ ಗೆ ಐತಿಹಾಸಿಕ ಮಹತ್ವವಿದೆ. ಈ ಬಾರಿ ಅದು ತನ್ನ ಹೊಸ ಸೂಕ್ತ ಹೆಸರು ಪಡೆಯಲಿದೆ" ಎಂದು ಬಿಜೆಪಿ ಪಾಲಿಕೆ ಸದಸ್ಯ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News