50 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 3 ವರ್ಷದ ಬಾಲಕನ ರಕ್ಷಣೆ

Update: 2023-07-23 17:59 GMT

Photo: twitter \ ANI 

ಪಾಟ್ನಾ: ಬಿಹಾರದ ನಲಂದಾ ಜಿಲ್ಲೆಯಲ್ಲಿ ರವಿವಾರ 50 ಅಡಿ ಆಳದ ಕೊಳವೆ ಬಾವಿಗೆ ಬಿದ್ದ 3 ವರ್ಷದ ಶಿವಂ ಕುಮಾರ್ನನ್ನು 8 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಿಸಲಾಯಿತು.

ಕುಲ್ ಗ್ರಾಮದ ನಿವಾಸಿಯಾಗಿರುವ ಶಿವಂ ಆಟವಾಡುತ್ತಿದ್ದಾಗ ಕೊಳವೆ ಬಾವಿಗೆ ಬಿದ್ದಿದ್ದ. ಶಿವಂನೊಂದಿಗೆ ಆಟವಾಡುತ್ತಿದ್ದ ಮಕ್ಕಳು ಆತನ ಹೆತ್ತವರಿಗೆ ಮಾಹಿತಿ ನೀಡಿದರು. ಅನಂತರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿತ್ತು. ರಕ್ಷಣಾ ತಂಡ ಶಿವಂನನ್ನು ಕೊಳವೆ ಬಾವಿಯಿಂದ ರಕ್ಷಿಸಿದೆ ಎಂದು ನಲಂದಾ ಜಿಲ್ಲೆಯ ಜಿಲ್ಲಾಧಿಕಾರಿ ಶಶಾಂಕ್ ಶುಭಂಕರ್ ಅವರು ತಿಳಿಸಿದ್ದಾರೆ.

‘‘ದೇವರಿಗೆ ಕೃತಜ್ಞತೆಗಳು, ಶಿವಂನ ಆರೋಗ್ಯ ಸ್ಥಿತಿ ಚೆನ್ನಾಗಿಯೇ ಇದೆ’’ ಎಂದು ಅವರು ಹೇಳಿದ್ದಾರೆ. ವೈದ್ಯರ ತಂಡವೊಂದನ್ನು ಸಿದ್ಧವಾಗಿ ಇರಿಸಲಾಗಿತ್ತು. ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದರು ಹಾಗೂ ಕೊಳವೆ ಬಾವಿಯಿಂದ ಶಿವಂನನ್ನು ರಕ್ಷಿಸಲು ಎಲ್ಲಾ ನೆರವು ಒದಗಿಸಿದರು. ಕಾರ್ಯಾಚರಣೆ ಯಶಸ್ವಿಯಾಯಿತು ಎಂದು ಶುಭಂಕರ್ ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News