ಸನಾತನ ಧರ್ಮ ಮಾತ್ರ ಧರ್ಮ, ಉಳಿದೆಲ್ಲವೂ ಕೇವಲ ಪಂಥಗಳು, ಆರಾಧನಾ ವಿಧಾನಗಳು : ಆದಿತ್ಯನಾಥ್
ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆಯು ಸೃಷ್ಟಿಸಿದ್ದ ವಿವಾದದ ಬೆನ್ನಿಗೇ, ಸನಾತನ ಧರ್ಮ ಮಾತ್ರ ಧರ್ಮವಾಗಿದ್ದು, ಉಳಿದೆಲ್ಲವೂ ಕೇವಲ ಪಂಥಗಳು, ಆರಾಧನಾ ವಿಧಾನಗಳು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ
ಗೋರಖ್ ಪುರ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಕುರಿತು ನೀಡಿದ್ದ ಹೇಳಿಕೆಯು ಸೃಷ್ಟಿಸಿದ್ದ ವಿವಾದದ ಬೆನ್ನಿಗೇ, ಸನಾತನ ಧರ್ಮ ಮಾತ್ರ ಧರ್ಮವಾಗಿದ್ದು, ಉಳಿದೆಲ್ಲವೂ ಕೇವಲ ಪಂಥಗಳು, ಆರಾಧನಾ ವಿಧಾನಗಳು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಾರೆ ಎಂದು ndtv.com ವರದಿ ಮಾಡಿದೆ.
‘ಶ್ರೀಮದ್ ಭಾಗವತ್ ಕಥಾ ಗ್ಯಾನ್ ಯಾಗ್ಯ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯನಾಥ್, “ಸನಾತನ ಧರ್ಮ ಮಾತ್ರ ಧರ್ಮವಾಗಿದ್ದು, ಉಳಿದೆಲ್ಲವೂ ಕೇವಲ ಪಂಥಗಳು, ಆರಾಧನಾ ವಿಧಾನಗಳು. ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದ್ದು, ಒಂದು ವೇಳೆ ಇದರ ಮೇಲೆ ದಾಳಿ ನಡೆದರೆ, ಜಗತ್ತಿನಾದ್ಯಂತ ಮಾನವೀಯತೆಯು ಬಿಕ್ಕಟ್ಟಿಗೆ ಸಿಲುಕಲಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಗೋರಖನಾಥ್ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಏಳು ದಿನಗಳ ‘ಶ್ರೀಮದ್ ಭಾಗವತ್ ಕಥಾ ಗ್ಯಾನ್ ಯಾಗ್ಯ’ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಸಮಾರಂಭವನ್ನು ಮಹಾಂತ ದಿಗ್ವಿಜಯ್ ನಾಥ್ ಅವರ 54ನೇ ಪುಣ್ಯ ತಿಥಿ ಹಾಗೂ ರಾಷ್ಟ್ರೀಯ ಸಂತ ಮಹಾಂತ ಅವೈದ್ಯನಾಥ್ ರ 9ನೇ ಪುಣ್ಯ ಸ್ಮರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು.