ಸನಾತನ ಧರ್ಮ ಹೇಳಿಕೆ ವಿವಾದ: ಉದಯನಿಧಿ, ಸ್ಟಾಲಿನ್‌ ವಿರುದ್ಧ ಬಿಹಾರದ ನ್ಯಾಯಾಲಯದಲ್ಲಿ ದೂರು

Update: 2023-09-04 13:17 GMT

ಉದಯನಿಧಿ ಸ್ಟಾಲಿನ್‌ , ಎಂ.ಕೆ.ಸ್ಟಾಲಿನ್‌ | Photo: PTI 

ಮುಝಫ್ಫರನಗರ್:‌ ಸನಾತನ ಧರ್ಮವನ್ನು ನಿರ್ಮೂಲನೆಗೈಯ್ಯಬೇಕೆಂದು ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಹಾಗೂ ಅವರ ತಂದೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ವಿರುದ್ಧ ಬಿಹಾರದ ಮುಝಫ್ಫರಪುರ್‌ನ ಮುಖ್ಯ ಜುಡಿಶಿಯಲ್‌ ಮ್ಯಾಜಿಸ್ಟ್ರೇಟ್‌ ಅವರ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ.

ಮುಝಫ್ಫರಪುರ್‌ ಮೂಲದ ವಕೀಲ ಸುಧೀರ್‌ ಕುಮಾರ್‌ ಓಝಾ ಎಂಬವರು ಈ ಅರ್ಜಿ ಸಲ್ಲಿಸಿದ್ದು ಈ ಹೇಳಿಕೆ ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂದಿದ್ದಾರೆ.

ರಾಜಕೀಯ ನೇತಾರರು ಹಾಗೂ ಇತರ ಸೆಲೆಬ್ರಿಟಿಗಳ ವಿರುದ್ಧ ಈ ಹಿಂದೆ ದೂರು ಸಲ್ಲಿಸಿ ಸುದ್ದಿಯಾಗಿರುವ ಓಝ ತಮ್ಮ ಅರ್ಜಿಯಲ್ಲಿ ತಮಿಳುನಾಡು ಸಿಎಂ ಮತ್ತವರ ಪುತ್ರನ ವಿರುದ್ಧ ಐಪಿಸಿ ಸೆಕ್ಷನ್‌ಗಳನ್ವಯ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಪ್ರಕರಣದ ವಿಚಾರಣೆ ಸೆಪ್ಟೆಂಬರ್‌ 14ರಂದು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News