ಬ್ರಿಜ್ ಭೂಷಣ್ ಪುತ್ರನಂತಿರುವ ಸಂಜಯ್ ಸಿಂಗ್ ನಿಂದ ಡಬ್ಲ್ಯುಎಫ್ಐನಲ್ಲಿ ಯಾವುದೇ ಬದಲಾವಣೆ ಅಸಾಧ್ಯ: ವಿನೇಶ್ ಪೋಗಟ್
ಹೊಸದಿಲ್ಲಿ :ಡಬ್ಲ್ಯುಎಫ್ಐನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಂಜಯ್ ಸಿಂಗ್, ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಪುತ್ರನಂತಿದ್ದು, ಅವರಿಂದ ಯಾವುದೇ ಬದಲಾವಣೆ ಸಾಧ್ಯವಿಲ್ಲವೆಂದು ಖ್ಯಾತ ಮಹಿಳಾ ಕುಸ್ತಿಪಟು ವಿನೇಶ್ ಪೋಗಟ್ ಕಳವಳ ವ್ಯಕ್ತಪಡಿಸಿದ್ದಾರೆ.
‘‘ಡಬ್ಲ್ಯುಎಫ್ಐ ಚುನಾವಣೆಯಲ್ಲಿ ಗೆಲುವು ಗಳಿಸಿದ ಕೂಡಲೇ ಸಂಜಯ್ ಸಿಂಗ್ ಬ್ರಿಜ್ ಭೂಷಣ್ ಅವರ ಮನೆಗೆ ತೆರಳಿ, ಅವರಿಗೆ ಹೂಹಾರ ಹಾಕಿದ್ದನ್ನು ಅವರು ಈ ಸಂದರ್ಭದಲ್ಲಿ ಉಲ್ಲೇಖಿಸಿದರು. ಅಧಿಕಾರದ ಬಗ್ಗೆ ಬ್ರಿಜ್ ಭೂಷಣ್ ಆಡಿರುವ ಮಾತುಗಳನ್ನು ಗಮನಿಸಿದರೆ, ಆತ ತಾನೊಬ್ಬ ದೇವರು ಅಥವಾ ರಾಜನೆಂದೇ ಭಾವಿಸಿದಂತಿದೆ’’ ಎಂದು ವಿನೇಶ್ ಅವರು ಆಜ್ತಕ್ ಟಿವಿ ವಾಹನಿಗೆ ನೀಡಿದ ಸಂದರ್ಶನವೊದರಲ್ಲಿ ಹೇಲಿದ್ದಾರೆ.
‘‘ಸಂಜಯ್ ಸಿಂಗ್ ಅವರು ಬ್ರಿಜ್ ಭೂಷಣ್ ಶರಣ್ ಅವರ ಮಗುವಿನಂತೆ, ಆ ಬಗ್ಗೆ ನಾವು ಅದನ್ನು ಬೆಟ್ಟು ಮಾಡಿ ತೋರಿಸಬೇಕಿಲ್ಲ. ಸಂಜಯ್ ಸಿಂಗ್ ಫೆಡರೇಶನ್ ಅಧ್ಯಕ್ಷನಾಗಿದ್ದರೆ, ಬ್ರಿಜ್ ಭೂಷಣ್ ಶರಣ್ ಸಿಂಗ್ ಕೈಯಲ್ಲಿ ಅಧಿಕಾರವಿದ್ದಂತೆ. ಅದರಲ್ಲಿ ವ್ಯತ್ಯಾಸವೇನೂ ಇರುವುದಿಲ್ಲ’’ ಎಂದು ವಿನೇಶ್ ಹೇಳಿದ್ದಾರೆ.