ಆಸ್ಕರ್‌ ಪ್ರಶಸ್ತಿಗೆ ಸಲ್ಲಿಕೆಯಾದ ‘ಸಾವರ್ಕರ್’ ಸಿನೆಮಾ

Update: 2024-09-24 16:49 GMT
PC : X \ @anandpandit63

ಹೊಸದಿಲ್ಲಿ : ಬಾಲಿವುಡ್ ನಟ ರಣದೀಪ್‌ ಹೂಡಾ ನಟಿಸಿ, ನಿರ್ದೇಶಿಸಿರುವ ‘ಸಾವರ್ಕರ್’ ಚಿತ್ರ 2025ನೇ ಸಾಲಿನ ಆಸ್ಕರ್‌ ‍ಪ್ರಶಸ್ತಿಗೆ ಸಲ್ಲಿಕೆಯಾಗಿದೆ ಎಂದು ಚಿತ್ರತಂಡ ತಿಳಿಸಿದೆ.

ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ಚಿತ್ರತಂಡ, “ನಮ್ಮ ಸಿನಿಮಾ ಆಸ್ಕರ್‌ ಪ್ರಶಸ್ತಿಗೆ ಅಧಿಕೃತ ಪ್ರವೇಶ ಪಡೆದಿದೆ. ಚಿತ್ರವನ್ನು ಗುರುತಿಸಿ ಆಯ್ಕೆ ಮಾಡಿದ್ದಕ್ಕಾಗಿ ಫಿಲ್ಮ್‌ ಫೆಡರೇಷನ್‌ ಗೆ ಧನ್ಯವಾದಗಳು. ಇದೊಂದು ರೋಮಾಂಚನಕಾರಿ ಪ್ರಯಾಣವಾಗಿದ್ದು, ಈ ಪ್ರಯಾಣದಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು’ ಎಂದ ತಿಳಿಸಿದೆ.

Full View

ನಟ ರಣದೀಪ್ ಹೂಡಾ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಟಿ ‌ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವು 2024 ರ ಮಾರ್ಚ್ 22ರಂದು ಹಿಂದಿ ಹಾಗೂ ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News