ನೀಟ್ | ರಾಜಸ್ಥಾನದ ಸಿಕರ್ ನಲ್ಲಿದೆ ಗರಿಷ್ಠ ಅಂಕ ಪಡೆದ 37 ನೀಟ್ ಪರೀಕ್ಷಾ ಕೇಂದ್ರಗಳು!

Update: 2024-07-21 15:35 GMT

Photo: ANI

ಹೊಸದಿಲ್ಲಿ : ಅತ್ಯುತ್ತಮ ಫಲಿತಾಂಶ ಹೋಗಿರುವ ದೇಶದ 50 ನೀಟ್ ಪರೀಕ್ಷಾ ಕೇಂದ್ರಗಳ ಪೈಕಿ 37 ರಾಜಸ್ಥಾನದ ಸಿಕರ್ ಜಿಲ್ಲೆಯೊಂದರಲ್ಲೇ ಇವೆ ಎಂದು ‘ದ ಹಿಂದೂ’ ರವಿವಾರ ವರದಿ ಮಾಡಿದೆ. ಈ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಬರೆದು ಒಟ್ಟು 720 ಅಂಕಗಳ ಪೈಕಿ 650ಕ್ಕಿಂತಲೂ ಅಧಿಕ ಅಂಕಗಳನ್ನು ಪಡೆದಿರುವ ಅಭ್ಯರ್ಥಿಗಳ ಶೇಕಡಾವಾರು ಪ್ರಮಾಣ ಗರಿಷ್ಠವಾಗಿದೆ.

ಪದವಿ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ಸ್ಪರ್ಧಾತ್ಮಕ ನೀಟ್-ಯುಜಿ ಪರೀಕ್ಷೆ ಮೇ 5ರಂದು ನಡೆದಿತ್ತು.

ಸಿಕರ್ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ಬರೆದ ಸುಮಾರು 7 ಶೇಕಡ ಅಭ್ಯರ್ಥಿಗಳು 650ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದಾರೆ. ಇದು ರಾಷ್ಟ್ರೀಯ ಸರಾಸರಿಯ 1.29 ಶೇಕಡಕ್ಕಿಂತ ತುಂಬಾ ಹೆಚ್ಚಾಗಿದೆ.

ಸಿಕರ್ ನೀಟ್ ಕೋಚಿಂಗ್ ತರಗತಿಗಳ ಕೇಂದ್ರ ಬಿಂದುವಾಗಿದೆ. ಅಲ್ಲಿ 11 ಪರೀಕ್ಷಾ ಕೇಂದ್ರಗಳಿದ್ದವು. ಆ ಪರೀಕ್ಷಾ ಕೇಂದ್ರಗಳ 100ಕ್ಕೂ ಅಧಿಕ ಅಭ್ಯರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದಾರೆ. ಒಂದು ಕೇಂದ್ರದಲ್ಲಿ, 155 ಅಭ್ಯರ್ಥಿಗಳು 600ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ.

ಸುಪ್ರೀಂ ಕೋರ್ಟ್ನ ಆದೇಶದಂತೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಶನಿವಾರ, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳ ಅಂಕಗಳನ್ನು ಬಹಿರಂಗಗೊಳಿಸಿದ ಬಳಿಕ ಈ ಅಂಶ ಬಯಲಿಗೆ ಬಂದಿದೆ.

ಈ ವರ್ಷ ಸುಮಾರು 24 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News