ಉತ್ತರಪ್ರದೇಶ : ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಕ್ಷ

Update: 2024-02-20 17:38 GMT

PHOTO: PTI

ಲಕ್ನೋ : ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಗೆ ಸಮಾಜವಾದಿ ಪಕ್ಷ ತನ್ನ ಐವರು ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದ್ದು, ಬುದೌನ್ ಸಂಸದೀಯ ಕ್ಷೇತ್ರದಿಂದ ಹಿರಿಯ ನಾಯಕ ಶಿವಪಾಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ.

ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಚಿಕ್ಕಪ್ಪ ಶಿವಪಾಲ್ ಯಾದವ್ ಅವರು ಇಟಾವಾ ಜಿಲ್ಲೆಯ ಜಸ್ವಂತ್ ನಗರ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ.

ವಾರಣಾಸಿಯಿಂದ ಸುರೇಂದ್ರ ಸಿಂಗ್ ಪಟೇಲ್, ಕೈರಾನಾದಿಂದ ಇಕ್ರಾ ಹಸನ್, ಬರೇಲಿಯಿಂದ ಪ್ರವೀಣ್ ಸಿಂಗ್ ಆರಾನ್ ಮತ್ತು ಹಮೀರ್‌ಪುರದಿಂದ ಅಜೇಂದ್ರ ಸಿಂಗ್ ರಜಪೂತ್ ಪಟ್ಟಿಯಲ್ಲಿರುವ ಇತರ ಅಭ್ಯರ್ಥಿಗಳು.

ಈ ಪಟ್ಟಿಯೊಂದಿಗೆ ಸಮಾಜವಾದಿ ಪಕ್ಷವು ಉತ್ತರ ಪ್ರದೇಶದ ಲೋಕಸಭೆ ಚುನಾವಣೆಗೆ ಇದುವರೆಗೆ 31 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ.

ಎಸ್ಪಿ ತನ್ನ ಮೊದಲ ಪಟ್ಟಿಯಲ್ಲಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸಹೋದರ ಅಭಯ್ ರಾಮ್ ಯಾದವ್ ಅವರ ಪುತ್ರ ಧರ್ಮೇಂದ್ರ ಯಾದವ್ ಅವರನ್ನು ಬುದೌನ್ ನಿಂದ ಕಣಕ್ಕಿಳಿಸಿದೆ.

ಅಖಿಲೇಶ್ ಯಾದವ್ ನೇತೃತ್ವದ ಪಕ್ಷವು ಇಂಡಿಯಾ ಬ್ಲಾಕ್‌ನಲ್ಲಿ ಮೈತ್ರಿ ಪಾಲುದಾರ ಕಾಂಗ್ರೆಸ್‌ಗೆ 17 ಲೋಕಸಭಾ ಸ್ಥಾನಗಳನ್ನು ನೀಡಿದೆ. ರಾಜ್ಯವು 80 ಲೋಕಸಭಾ ಕ್ಷೇತ್ರಗಳನ್ನು ಹೊಂದಿದೆ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News