ಚಂಡಮಾರುತ ತೇಜ್ ಪ್ರಭಾವ: ಯುಎಇಯಾದ್ಯಂತ ಗುಡುಗು ಮಿಂಚು ಸಹಿತ ಭಾರೀ ಮಳೆ
Update: 2023-10-26 12:49 GMT
ಅಬುಧಾಬಿ: ಚಂಡಮಾರುತ ತೇಜ್‌ನ ಪರೋಕ್ಷ ಪ್ರಭಾವದಿಂದಾಗಿ ಸಂಯುಕ್ತ ಅರಬ್ ಸಂಸ್ಥಾನದಾದ್ಯಂತ ಭಾರೀ ಮಳೆಯಾಗುತ್ತಿದ್ದು ಹಲವೆಡೆ ರಸ್ತೆಗಳಲ್ಲಿಯೇ ನೀರು ಹರಿಯುತ್ತಿದ್ದು ವಾಹನ ಸವಾರರು ಅಪಾಯವನ್ನೆದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಕಳೆದ ಹತ್ತು ದಿನಗಳಿಂದ ಯುಎಇ ನಲ್ಲಿ ಮಳೆಯಾಗುತ್ತಿದೆ. ಗುರುವಾರ ಗುಡುಗು ಸಿಡಿಲಿನಿಂದ ಕೂಡಿದ ಮಳೆ ಹಾಗೂ ಆಲಿಕಲ್ಲು ಮಳೆ ಶಾರ್ಜಾದ ಪೂರ್ವ ಮತ್ತು ಮಧ್ಯಭಾಗದಲ್ಲಿ ಬೀಳುವ ಸಾಧ್ಯತೆಯಿದೆ ಎಂದು ಅಲ್ಲಿನ ಹವಾಮಾನ ಇಲಾಖೆ ಹೇಳಿದೆ.
ಅಬುಧಾಬಿ, ಅಲ್ ಧಫ್ರಾ, ಅಲ್ ಐನ್ ಮತ್ತು ಇತರ ಪ್ರದೇಶಗಳಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮಳೆಯಿಂದಾಗಿ ವಾಹನ ಚಲಾಯಿಸುವಾಗ ವೇಗ ಕಡಿಮೆಗೊಳಿಸುವಂತೆ ಅಬುಧಾಬಿ ಪೊಲೀಸರು ಸವಾರರಿಗೆ ಸೂಚಿಸಿದ್ಧಾರೆ. ನಿವಾಸಿಗಳಿಗೆ ಮುನ್ನೆಚ್ಚರಿಕಾ ಕ್ರಮವಾಗಿ ಅವರ ಮೊಬೈಲ್ ಫೋನ್‌ಗಳಿಗೆ ಎಚ್ಚರಿಕೆಗಳನ್ನೂ ರವಾನಿಸಲಾಗಿದೆ.
ಅಬುಧಾಬಿಯ ಹಲವು ರಸ್ತೆಗಳಲ್ಲಿ ಕಡಿಮೆ ವೇಗ ವ್ಯವಸ್ಥೆಯನ್ನು ಸಕ್ರಿಯಗೊಳಿಸಲಾಗಿದೆ.