ಸಿಂಧೂ ಕಣಿವೆ ಲಿಪಿಯನ್ನು ಭೇದಿಸುವವರಿಗೆ 10 ಲಕ್ಷ ಡಾಲರ್ ಬಹುಮಾನ ಘೋಷಿಸಿದ ಸ್ಟಾಲಿನ್!

Update: 2025-01-05 17:08 GMT

ಎಂ.ಕೆ.ಸ್ಟಾಲಿನ್ | PC : PTI

ಚೆನ್ವೈ: ಸಿಂಧೂ ಕಣಿವೆಯ ಲಿಪಿ ಕಳೆದೊಂದು ಶತಮಾನದಿಂದಲೂ ಬಿಡಿಸಲಾಗದ ಒಗಟಾಗಿ ಉಳಿದುಕೊಂಡಿದೆ ಎಂದು ರವಿವಾರ ಇಲ್ಲಿ ಹೇಳಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು,ಈ ಲಿಪಿಯನ್ನು ಭೇದಿಸುವವರಿಗೆ 10 ಲಕ್ಷ ಅಮೆರಿಕನ್ ಡಾಲರ್(8,57,66,500 ರೂ.) ಬಹುಮಾನವನ್ನು ನೀಡುವುದಾಗಿ ಘೋಷಿಸಿದರು.

ಸಿಂಧೂ ನಾಗರಿಕತೆಯ ಶೋಧದ ಶತಾಬ್ದಿಯ ಅಂಗವಾಗಿ ಮೂರು ದಿನಗಳ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಒಂದು ಕಾಲದಲ್ಲಿ ಪ್ರವರ್ಧಮಾನದಲ್ಲಿದ್ದ ಸಿಂಧೂ ಕಣಿವೆ ನಾಗರಿಕತೆಯ ಲಿಪಿಯನ್ನು ಅರ್ಥೈಸಿಕೊಳ್ಳಲು ನಮಗೆ ಈಗಲೂ ಸಾಧ್ಯವಾಗಿಲ್ಲ. ಈ ಒಗಟನ್ನು ಬಿಡಿಸಲು ವಿದ್ವಾಂಸರು ಇಂದಿಗೂ ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ಉತ್ತೇಜಿಸಲು ಈ ಲಿಪಿಯನ್ನು ಭೇದಿಸುವ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಒಂದು ಲಕ್ಷ ಡಾಲರ್ ಬಹುಮಾನ ನೀಡಲಾಗುವುದು ’ ಎಂದು ತಿಳಿಸಿದರು.

ಅತ್ಯಂತ ಪ್ರಾಚೀನ ನಾಗರಿಕತೆಗಳಲ್ಲಿ ಒಂದಾದ ಸಿಂಧೂ ನಾಗರಿಕತೆಯು ತನ್ನ ನಗರ ಸಂಸ್ಕೃತಿಗಾಗಿ ಹೆಸರುವಾಸಿಯಾಗಿದ್ದು,ಅದರ ಲಿಪಿಯನ್ನು ಈವರೆಗೆ ಭೇದಿಸಲು ಸಾಧ್ಯವಾಗಿಲ್ಲ.

ಇಂತಹ ನಾಗರಿಕತೆಯು ಮರೆಯಾಗಿದ್ದು ಮತ್ತು ಅದರ ಸಂದರ್ಭ ಕೂಡ ಇಂದಿಗೂ ಒಗಟಾಗಿಯೇ ಉಳಿದಿವೆ.

Full View

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News