ತೆಲಂಗಾಣ: ತಂಬಾಕು, ಗುಟ್ಕಾ ಉತ್ಪನ್ನಗಳಿಗೆ ನಿಷೇಧ

Update: 2024-05-28 16:54 GMT

ಸಾಂದರ್ಭಿಕ ಚಿತ್ರ - Photo: thehindu

ಹೈದರಾಬಾದ್: ತೆಲಂಗಾಣ ಸರಕಾರವು ರಾಜ್ಯದಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶವನ್ನು ಒಳಗೊಂಡ ಗುಟ್ಕಾ ಹಾಗೂ ಪಾನ್ ಮಸಾಲಾದ ಉತ್ಪಾದನೆ, ದಾಸ್ತಾನು, ವಿತರಣೆ ಹಾಗೂ ಮಾರಾಟವನ್ನು ನಿಷೇಧಿಸಿ ಆದೇಶವನ್ನು ಜಾರಿಗೊಳಿಸಿದೆ.

ಸಾರ್ವಜನಿಕರ ಕ್ಷೇಮ ಹಾಗೂ ಆರೋಗ್ಯದ ಬಗೆಗಿನ ಕಳಕಳಿಯಿಂದ ಈ ನಿಷೇಧವನ್ನು ಜಾರಿಗೊಳಿಸಲಾಗಿದೆಯೆಂದು ತೆಲಂಗಾಣ ಸರಕಾರ ತಿಳಿಸಿದೆ. ಆಹಾರ ಸುರಕ್ಷತೆ ಹಾಗೂ ಗುಣಮಟ್ಟದ ಕಾಯ್ದೆ 2006ರಡಿ ಈ ನಿಷೇಧವನ್ನು ಜಾರಿಗೊಳಿಸಲಾಗಿದೆಯೆಂದು ಆಹಾರ ಸುರಕ್ಷತಾ ಆಯುಕ್ತರ ಆದೇಶವು ತಿಳಿಸಿದೆ.

ಗುಟ್ಕಾ ಹಾಗೂ ಪಾನ್ ಮಸಾಲಾದ ಸೇವನೆಯಿಂದ ಆರೋಗ್ಯಕ್ಕೆ ಗಂಭೀರವಾದ ಅಪಾಯಗಳನ್ನು ಪರಿಗಣನೆಗೆ ತೆಗೆದುಕೊಂಡು ಈ ಕ್ರಮವನ್ನು ಕೈಗೊಳ್ಳಲಾಗಿದೆ. ಬಾಯಿ ಕ್ಯಾನ್ಸರ್,ಬಾಯಿಯಲ್ಲಿ ಗಡ್ಜೆ ಮತ್ತಿತರ ಹಲವು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತಂಬಾಕು ಉತ್ಪನ್ನಗಳು ಕಾರಣವಾಗುತ್ತವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈ ಮಧ್ಯೆ ಪಾನ್ ಅಂಗಡಿಗಳ ಮಾಲಕರ ಸಂಘದ ಅಧ್ಕ್ಷ ಮೊಹಮ್ಮದ್ ಸಲಾಹುದ್ದೀನ್ ದಖ್ಖನಿ ಅವರು ಆದರೆ ಪಾನ್ ಹಾಗೂ ಜರ್ದಾ ಮಾರಾಟವನ್ನು ನಂಬಿ ಲಕ್ಷಾಂತರ ಕುಟುಂಬಗಳು ಜೀವನಸಾಗಿಸುತ್ತಿದ್ದು, ಅವುಗಳಿಗೆ ನಿಷೇಧದಿಂದ ವಿನಾಯಿತಿ ನೀಡಬೇಕೆಂದು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News