ಲೋಕಸಭಾ ಚುನಾವಣೆ ನಂತರದ ಪ್ರಥಮ ಸಂಸತ್‌ ಅಧಿವೇಶನ ಕೆಲವೇ ಕ್ಷಣಗಳಲ್ಲಿ ಆರಂಭ

Update: 2024-06-24 05:19 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಲೋಕಸಭಾ ಚುನಾವಣಾ ಫಲಿತಾಂಶಗಳ ನಂತರ ಸಂಸತ್‌ನ ಪ್ರಥಮ ಅಧಿವೇಶನ ಇಂದು ಕೆಲವೇ ಕ್ಷಣಗಳಲ್ಲಿ ಆರಂಭಗೊಳ್ಳಲಿದೆ.

ಬಿಜೆಪಿ ಸಂಸದ ಭಾತೃಹರಿ ಮಹತಬ್‌ ಅವರನ್ನು ಪ್ರೋ-ಟೆಮ್‌ ಸ್ಪೀಕರ್‌ ಆಗಿ ಈಗಾಗಲೇ ನೇಮಕಗೊಳಿಸಿರುವುದರಿಂದ ಅವರಿಗೆ ಮೊದಲು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ಸ್ಪೀಕರ್‌ ನಂತರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದು ನಂತರ ಎಲ್ಲಾ ಹೊಸದಾಗಿ ಚುನಾಯಿತ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಈ ನಡುವೆ ಕೇರಳದದಿಂದ ಎಂಟನೇ ಬಾರಿಗೆ ಆಯ್ಕೆಯಾಗಿರುವ ದಲಿತ ನಾಯಕ ಕೊಡಿಕುನ್ನಿಲ್‌ ಸುರೇಶ್‌ ಅವರನ್ನು ಪ್ರೊ-ಟೆಮ್‌ ಸ್ಪೀಕರ್‌ ಮಾಡುವ ಬದಲು ಮಹ್ತಬ್‌ ಅವರನ್ನು ಸ್ಪೀಕರ್‌ ಮಾಡಿರುವುದು ಕೂಡ ವಿವಾದಕ್ಕೀಡಾಗಿರುವುದರಿಂದ ಇಂದಿನ ಅಧಿವೇಶನದ ವೇಳೆ ಈ ವಿಚಾರವನ್ನು ಕೂಡ ವಿಪಕ್ಷಗಳು ಎತ್ತುವ ನಿರೀಕ್ಷೆಯಿದೆ.

ಹೊಸ ಸ್ಪೀಕರ್‌ ಆಯ್ಕೆ ಜೂನ್‌ 26ರಂದು ನಡೆಯುವ ನಿರೀಕ್ಷೆಯಿದ್ದು ಪ್ರಧಾನಿ ಮೋದಿ ಬುಧವಾರ ನೂತನ ಸ್ಪೀಕರ್‌ ಅವರ ಹೆಸರು ಘೋಷಿಸುವ ನಿರೀಕ್ಷೆಯಿದೆ.

ನೀಟ್‌ ಅವ್ಯವಹಾರಗಳು ದೇಶಾದ್ಯಂತ ಗದ್ದಲ ಸೃಷ್ಟಿಸಿರುವ ನಡುವೆ ವಿಪಕ್ಷಗಳು ಇಂದಿನ ಅಧಿವೇಶನದಲ್ಲಿ ಆ ವಿಚಾರವನ್ನು ಪ್ರಸ್ತಾಪಿಸುವ ನಿರೀಕ್ಷೆಯಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News