ದೇವಾಲಯದಲ್ಲಿ ನ್ಯಾಯಾಧೀಶರ ಪುತ್ರನ ಶೂ ಕಳ್ಳತನ; ತನಿಖೆ ಆರಂಭಿಸಿದ ಪೊಲೀಸರು

Update: 2023-08-28 17:13 GMT

ಸಾಂದರ್ಭಿಕ ಚಿತ್ರ.

ಜೈಪುರ: ಮಗನ 10,000 ರೂಪಾಯಿ ಬೆಲೆಬಾಳುವ ಪಾದರಕ್ಷೆ ದೇವಸ್ಥಾನದಲ್ಲಿ ಕಳ್ಳತನವಾಗಿರುವ ಕುರಿತಂತೆ ಹಿರಿಯ ನ್ಯಾಯಾಧೀಶರೊಬ್ಬರು ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯ ಬಂಧನಕ್ಕೆ ರಾಜಸ್ಥಾನ ಪೊಲೀಸರು ಬಲೆ ಬೀಸಿದ್ದಾರೆ.

ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಶುಕ್ರವಾರ ನಗರದ ಮನಕ್ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆಯನ್ನು ಹೆಡ್ ಕಾನ್‌ಸ್ಟೇಬಲ್ ಗೆ ವಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸ್ ಅಧಿಕಾರಿಯ ಪ್ರಕಾರ, ನ್ಯಾಯಾಧೀಶರು ಆಗಸ್ಟ್ 20 ರಂದು ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಶ್ರೀ ಬ್ರಿಜ್ ನಿಧಿ ಜಿ ದೇವಸ್ಥಾನಕ್ಕೆ ಹೋಗಿದ್ದರು.

ನ್ಯಾಯಾಧೀಶರ ಮಗ ಸುಮಾರು 10,000 ಮೌಲ್ಯದ ಶೂ ಧರಿಸಿದ್ದರು. ಅವರು ರಾತ್ರಿ 8 ಗಂಟೆಗೆ ದೇವಾಲಯದ ಮೆಟ್ಟಿಲುಗಳ ಬಳಿ ಶೂಗಳನ್ನು ಕಳಚಿ ದೇವಾಲಯ ಪ್ರವೇಶಿಸಿದ್ದರು. ರಾತ್ರಿ 10 ಗಂಟೆಗೆ ದೇವಸ್ಥಾನದಿಂದ ಹೊರಡುವಾಗ ದುಬಾರಿ ಶೂಗಳು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

ದೇವಾಲಯದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುವ ಮೂಲಕ ಪಾದರಕ್ಷೆ ಕಳ್ಳರನ್ನು ಪತ್ತೆ ಹಚ್ಚುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪಾದರಕ್ಷೆಗಳನ್ನು ಕದ್ದು ಪರಾರಿಯಾದ ವ್ಯಕ್ತಿಯನ್ನು ಗುರುತಿಸಲು ನಮ್ಮ ತಂಡಗಳು ದೇವಾಲಯದ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸುತ್ತಿವೆ” ಎಂದು ಅಧಿಕಾರಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News