ಉಮರ್ ಖಾಲಿದ್ ಜಾಮೀನು ಅರ್ಜಿಯ ವಿಚಾರಣೆ ಆಗಸ್ಟ್ 18ಕ್ಕೆ ಮುಂದೂಡಿಕೆ

Update: 2023-08-18 18:17 GMT

 ಉಮರ್ ಖಾಲಿದ್ | Photo: PTI 

ಹೊಸದಿಲ್ಲಿ: ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 2020ರ ಫೆಬ್ರವರಿ ತಿಂಗಳಲ್ಲಿ ನಡೆದ ಕೋಮುಗಲಭೆಗೆ ಸಂಬಂಧಿಸಿದ ಯುಎಪಿಎ (ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ) ಪ್ರಕರಣದಲ್ಲಿ ಜವಾಹರಲಾಲ್ ನೆಹರೂ ವಿವಿಯ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಸಲ್ಲಿಸಿರುವ ಜಾಮೀನು ಅರ್ಜಿಯ ಆಲಿಕೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 18ಕ್ಕೆ ಮುಂದೂಡಿದೆ.

ಉಮರ್ ಖಾಲಿದ್ ಅವರ ಜಾಮೀನು ಅರ್ಜಿಯ ಆಲಿಕೆಯನ್ನು ಬೇರೆ ಬೇರೆ ದಿನಗಳಲ್ಲಿ ನಡೆಸಲಾಗುವುದು ಹಾಗೂ ಮುಂದಿನ ಎರಡು ವಾರಗಳ ಬಳಿಕ ಅದನ್ನು ವಿಚಾರಣೆಗೆ ಪಟ್ಟಿ ಮಾಡುವಂತೆ ಅನಿರುದ್ದ ಬೋಸ್ ಹಾಗೂ ಬೇಲಾ ತ್ರಿವೇದಿ ಅವರನ್ನೊಳಗೊಂಡ ನ್ಯಾಯಪೀಠ ಆದೇಶಿಸಿತು. ಖಾಲಿದ್ ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಇದಕ್ಕೆ ಸಮ್ಮತಿಯನ್ನು ಸೂಚಿಸಿದರು. ಪ್ರಕರಣದ ಆಲಿಕೆಯನ್ನು ಎರಡು ವಾರಗಳ ನಂತರ ಪಟ್ಟಿ ಮಾಡುವಂತೆ ನ್ಯಾಯಾಲಯ ಸೂಚಿಸಿತು.

ಸುಪ್ರೀಂಕೋರ್ಟ್ ನಲ್ಲಿ ಮಂಗಳವಾರ, ಬುಧವಾರ ಹಾಗೂ ಗುರುವಾರವನ್ನು ವಿವಿಧವಲ್ಲದ ದಿನಗಳು ಎಂದು ಕರೆಯಲಾಗುತ್ತದೆ. ಈ ದಿನಗಳಲ್ಲಿ ಸುದೀರ್ಘ ಆಲಿಕೆಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುತ್ತದೆ.

ತನ್ನ ಜಾಮೀನು ಅರ್ಜಿಯ ಆಲಿಕೆಯು ಆರಂಭಗೊಳ್ಳುವುದೆಂಬ ಉಮರ್ ಖಾಲಿದ್ ಅವರ ಆಶಾವಾದವು ಶುಕ್ರವಾರ ಭಗ್ನಗೊಂಡಿತು. ಈ ಪ್ರಕರಣದ ಆಲಿಕೆಯು ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಹಾಗೂ ಪಿ.ಕೆ.ಮಿಶ್ರಾ ಅವರನ್ನೊಳಗೊಂಡ ನಾಯಪೀಠದ ಮುಂದೆ ಆಲಿಕೆಗೆ ಬಂದಿತ್ತು. ಆದರೆ ನ್ಯಾಯಮೂರ್ತಿ ಮಿಶ್ರಾ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು. ಹೀಗಾಗಿ ಆಗಸ್ಟ್ 17ಕ್ಕೆ ಮುಂದೂಡಲ್ಪಟ್ಟ ಆಲಿಕೆಯನ್ನು ಇತರ ನ್ಯಾಯಾಧೀಶರ ಪೀಠವು ನಡೆಸಿತು.

ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ನಾಯಕನಾದ ಉಮರ್ ಖಾಲಿದ್ನನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಬಂಧಿಸಲಾಗಿತ್ತು. ಉಮರ್ ಖಾಲಿದ್ ಅವರು ದಿಲ್ಲಿಯಲ್ಲಿ ನಡೆದ ಕೋಮುಹಿಂಸಾಚಾರದ ಹಿಂದಿರುವ ಬೃಹತ್ ಸಂಚಿನ ಭಾಗವಾಗಿದ್ದರೆಂದು ಪ್ರಾಸಿಕ್ಯೂಶನ್ ಆಪಾದಿಸಿತ್ತು.

ತನ್ನ ಕಕ್ಷಿದಾರ ಉಮರ್ ಖಾಲಿದ್ ಎರಡೂ ವರ್ಷಗಳಿಗೂ ಅಧಿಕ ಸಮಯದಿಂದ ಜೈಲಿನಲ್ಲಿದ್ದಾರೆ. ವೈಯಕ್ತಿಕ ಸ್ವಾತಂತ್ರವನ್ನು ಕೋರಿ ಸಲ್ಲಿಸಲಾದ ಅರ್ಜಿಯ ಆಲಿಕೆಯನ್ನು ವಿಳಂಬಿಸಬಾರದೆಂದು ಅವರು ಆಗ್ರಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News