ಉತ್ತರ ಪ್ರದೇಶ | ಅತ್ಯಾಚಾರವೆಸಗಿ, ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯನ್ನು ಹತ್ಯೆಗೈದ ಅಪ್ರಾಪ್ತನನ್ನು ಬಂಧಿಸಿದ ಪೊಲೀಸರು

Update: 2024-05-26 12:05 GMT

ಸಾಂದರ್ಭಿಕ ಚಿತ್ರ

ಮುಝಾಫ್ಪರ್ ನಗರ್ (ಉತ್ತರ ಪ್ರದೇಶ): ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರವೆಸಗಿದ್ದ 50 ವರ್ಷದ ವ್ಯಕ್ತಿಯೊಬ್ಬನನ್ನು ಹತ್ಯೆಗೈದ 15 ವರ್ಷದ ಅಪ್ರಾಪ್ತ ಬಾಲಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಮುಝಾಫ್ಫರ್ ನಗರ್ ನಲ್ಲಿ ನಡೆದಿದೆ. ಹತ್ಯೆಗೀಡಾದ ವ್ಯಕ್ತಿಯ ಮೃತ ದೇಹವು ಆರೋಪಿ ಬಾಲಕನ ಮನೆಯಲ್ಲಿ ಸೋಮವಾರ ಪತ್ತೆಯಾಗಿತ್ತು.

ಬಾಲಕನನ್ನು ಶನಿವಾರ ಬಂಧಿಸಲಾಗಿದ್ದು, ಆತನನ್ನು ಬಾಲಾಪರಾಧ ಗೃಹಕ್ಕೆ ಕಳಿಸಲಾಗಿದೆ. ಮೃತ ವ್ಯಕ್ತಿಯ ಕುಟುಂಬದ ಸದಸ್ಯರು ನೀಡಿರುವ ದೂರನ್ನು ಆಧರಿಸಿ ಪೊಲೀಸರು ಆತನ ವಿರುದ್ಧ ಹತ್ಯೆಯ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

“ವಾರಗಳ ಹಿಂದೆ ಅಪ್ರಾಪ್ತ ಬಾಲಕನೊಂದಿಗೆ ಸಂಭೋಗ ಕ್ರಿಯೆ ನಡೆಸಿದ್ದ ಮೃತ ವ್ಯಕ್ತಿಯು, ಆ ಸಂದರ್ಭದ ಅಶ್ಲೀಲ ವೀಡಿಯೊವನ್ನು ಚಿತ್ರೀಕರಿಸಿಕೊಂಡಿದ್ದ” ಎಂದು ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಬನ್ಸಲ್ ತಿಳಿಸಿದ್ದಾರೆ.

ಬಾಲಕನ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದ ಮೃತ ವ್ಯಕ್ತಿಯು, ಆತನನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದೂ ಅವರು ಹೇಳಿದ್ದಾರೆ. ಕಳೆದ ಸೋಮವಾರ ಮೃತ ವ್ಯಕ್ತಿಯು ಬಾಲಕನನ್ನು ಮತ್ತೆ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ಆತನಿಗೆ ಕಿರುಕುಳ ನೀಡಿದಾಗ, ಕುಪಿತಗೊಂಡ ಬಾಲಕನು ಹರಿತವಾದ ಆಯುಧದಿಂದ ಆತನ ತಲೆ ಮತ್ತು ಗಂಟಲಿಗೆ ಇರಿದಿದ್ದಾನೆ ಎನ್ನಲಾಗಿದೆ.

ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News