ಬಾಲಕಿಯರ ಎದೆ ಭಾಗ ಸ್ಪರ್ಷಿಸುವ ಬಿಜೆಪಿ ಶಾಸಕನ ಅನುಚಿತ ವಿಡಿಯೋ ವೈರಲ್:‌ ವ್ಯಾಪಕ ಆಕ್ರೋಶ

Update: 2023-06-23 15:02 GMT

ಭೋಪಾಲ್: ಬಿಜೆಪಿ ಶಾಸಕ, ಮಾಜಿ ಸಚಿವ ಮತ್ತು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಗೌರಿ ಶಂಕರ್ ಬಿಸೆನ್ ಅವರು ಕಾರ್ಯಕ್ರಮವೊಂದರಲ್ಲಿ ಅಪ್ರಾಪ್ತ ಬಾಲಕಿಯರನ್ನು ಅನುಚಿತವಾಗಿ ಸ್ಪರ್ಶಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಜೆಪಿ ನಾಯಕ ಸಾರ್ವಜನಿಕ ಸಭೆಯೊಂದರಲ್ಲಿ ಇಬ್ಬರು ಬಾಲಕಿಯರನ್ನು ಎಳೆದು ಅವರ ತೋಳು, ಎದೆ ಭಾಗಗಳನ್ನು ಸ್ಪರ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಬಿಜೆಪಿ ನಾಯಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕಾಂಗ್ರೆಸ್‌, ಎಎಪಿ ಸೇರಿದಂತೆ ಹಲವು ಪಕ್ಷಗಳು, ನೆಟ್ಟಿಗರು ಬಿಜೆಪಿ ಶಾಸಕನ ವರ್ತನೆಗೆ ಕಿಡಿ ಕಾರಿದ್ದಾರೆ.

‘ಬಲಾತ್ಕಾರಿ ಜನತಾ ಪಾರ್ಟಿ’ಯ ಶಾಸಕ ಗೌರಿಶಂಕರ್ ಬಿಸೆನ್ ಅವರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಇಂತಹ ನೀಚ ಕೃತ್ಯಗಳನ್ನು ಮಾಡುತ್ತಿದ್ದಾರೆ. ಅದಕ್ಕಾಗಿಯೇ ಕೇಜ್ರಿವಾಲ್ ಅವರು ಬಿಜೆಪಿ ಅತ್ಯಾಚಾರಿಗಳ, ಲುಚ್ಚ-ಲಫಂಗರ ಪಕ್ಷವಾಗಿದೆ, ನಾವು ನಮ್ಮ ಹೆಣ್ಣು ಮಕ್ಕಳನ್ನು ಅವರಿಂದ ರಕ್ಷಿಸಬೇಕು ಎಂದು ಹೇಳಿದ್ದಾರೆ ಎಂದು ಎಎಪಿ ಟ್ವೀಟ್‌ ಮಾಡಿದೆ.


 


Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News