1951ರಲ್ಲಿ ನೆಹರೂ ಏಕೆ ಭಾರತದ 'ಪ್ರಪ್ರಥಮ ನಗದಿಗಾಗಿ ಪ್ರಶ್ನೆ ಪ್ರಕರಣದಲ್ಲಿ' ಉಚ್ಚಾಟನೆಯ ನಿರ್ಣಯ ಮಂಡಿಸಿದ್ದರು?: ಒಂದು ರಾಜಕೀಯ ಹಿನ್ನೋಟ

Update: 2023-12-09 18:31 GMT

Photo: (Wikimedia Commons)

ಹೊಸದಿಲ್ಲಿ: ‘ನಗದಿಗಾಗಿ ಪ್ರಶ್ನೆ’ ಪ್ರಕರಣದಲ್ಲಿ ಕೃಷ್ಣಾನಗರವನ್ನು ಪ್ರತಿನಿಧಿಸುತ್ತಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಲೋಕಸಭೆ ಉಚ್ಚಾಟಿಸಿದೆ. ಈ ಉಚ್ಚಾಟನೆ ಶಿಫಾರಸಿಗೂ ಮುನ್ನ, 1951ರಲ್ಲಿ ಲೋಕಸಭೆಯಲ್ಲಿ ಅನೈತಿಕ ನಡವಳಿಕೆ ಪ್ರದರ್ಶಿಸಿದ ಕಾರಣಕ್ಕೆ 1951ರಲ್ಲಿ ಉಚ್ಚಾಟನೆಗೊಂಡಿದ್ದ ಮುದ್ಗಲ್ ಪ್ರಕರಣವನ್ನು ಸಂಸದೀಯ ನೈತಿಕ ಸಮಿತಿಯು ಪೂರ್ವ ನಿದರ್ಶನವಾಗಿ ಉದಾಹರಿಸಿದೆ ಎಂದು indianexpress.com ವರದಿ ಮಾಡಿದೆ.

1951ರಲ್ಲಿ ನಡೆದದ್ದೇನು?

ಎಚ್‍.ಜಿ.ಮುದ್ಗಲ್ ಅವರು ಪ್ರಾಂತೀಯ ಸಂಸತ್ತಿಗೆ ಬಾಂಬೆಯಿಂದ ಕಾಂಗ್ರೆಸ್ ಸಂಸದರಾಗಿದ್ದರು. 1952ರಲ್ಲಿ ಪ್ರಪ್ರಥಮ ಸಾರ್ವತ್ರಿಕ ಚುನಾವಣೆ ನಡೆಯುವವರೆಗೂ ಸಂಸತ್ತಿನ ಎರಡೂ ಸದನಗಳ ಮೇಲೆ ಸಂವಿಧಾನ ಕೊಡ ಮಾಡಿದ್ದ ಅಧಿಕಾರವನ್ನು ಸಾಂವಿಧಾನಿಕ ಸದನ ಚಲಾಯಿಸುತ್ತಿತ್ತು.

ಆದರೆ, ಜೂನ್ 6, 1951ರಂದು ಪ್ರಧಾನಿ ಹಾಗೂ ಸದನದ ನಾಯಕರಾಗಿದ್ದ ಜವಾಹರ ಲಾಲ್ ನೆಹರೂ ಅವರು ಮುದ್ಗಲ್ ನಡವಳಿಕೆಯ ವಿರುದ್ಧ ನಿರ್ಣಯವೊಂದನ್ನು ಸದನದ ಮುಂದೆ ಮಂಡಿಸಿದ್ದರು.

ಐಚ್ಛಿಕ ಉದ್ಯಮ, ಮುದ್ರಾಂಕ ಇತ್ಯಾದಿ ಸಮಸ್ಯೆಗಳ ಕುರಿತು ಸಂಸತ್ತಿನಲ್ಲಿ ಅಪಪ್ರಚಾರ ಮಾಡಲು ಹಾಗೂ ಬೆಂಬಲಿಸಲು ಬಾಂಬೆ ಬುಲಿಯನ್ ಅಸೋಸಿಯೇಷನ್ ನೊಂದಿಗೆ ಎಚ್.ಜಿ.ಮುದ್ಗಲ್ ಮಾಡಿಕೊಂಡಿರುವ ಕೆಲವು ಒಪ್ಪಂದಗಳಲ್ಲಿ ಅವರ ನಡವಳಿಕೆ ಹಾಗೂ ಚಟುವಟಿಕೆಗಳ ಕುರಿತು ತನಿಖೆ ನಡೆಸಲು ಟಿ.ಟಿ.ಕೃಷ್ಣಮಾಚಾರಿ, ಪ್ರೊ. ಕೆ.ಟಿ.ಶಾ, ಸೈಯದ್ ನೌಶೇರ್ ಅಲಿ, ಶ್ರೀಮತಿ ಜಿ. ದುರ್ಗಾಬಾಯಿ ಹಾಗೂ ಕಾಶಿನಾಥ ರಾವ್ ವೈದ್ಯ ಅವರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು ಎಂದು ನೆಹರೂ ಪ್ರಸ್ತಾಪ ಮಂಡಿಸಿದ್ದರು. ಅದಕ್ಕಾಗಿ ಎಚ್.ಜಿ.ಮುದ್ಗಲ್ ಅವರು ಬಾಂಬೆ ಬುಲಿಯನ್ ಅಸೋಸಿಯೇಷನ್ ನಿಂದ ಆರ್ಥಿಕ ಅಥವಾ ಔದ್ಯಮಿಕ ಲಾಭಗಳನ್ನು ಪಡೆಯುತ್ತಿದ್ದಾರೆ ಎಂದೂ ಆರೋಪಿಸಲಾಗಿತ್ತು.

“ಸಮಿತಿಯು ಗೌರವಾನ್ವಿತ ಸದಸ್ಯರ ನಡವಳಿಕೆಯು ಸದನದ ಘನತೆಗೆ ಚ್ಯುತಿ ತರುವಂತಿದೆಯೆ ಹಾಗೂ ಸಂಸತ್ತು ತನ್ನ ಸದಸ್ಯರಿಂದ ನಿರೀಕ್ಷಿಸುವ ಮಾನದಂಡಗಳು ಅಸ್ಥಿರವಾಗಿಯೆ? ಎಂಬುದರ ಕುರಿತು ಪರಿಗಣಿಸಿ, ವರದಿ ನೀಡಲಿದೆ” ಎಂದು ನೆಹರೂ ಹೇಳಿದ್ದರು.

ಇದೊಂದು ಅಸಹಜ ನಿರ್ಣಯ ಎಂದು ಹೇಳಿದ್ದ ನೆಹರೂ, “ಈ ನಿರ್ಣಯವನ್ನು ಮೊದಲ ಆದ್ಯತೆಯನ್ನಾಗಿ ಮಂಡಿಸಲು ಮುಜುಗರವಾಗುತ್ತಿದ್ದರೂ, ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಮಂಡಿಸಲಾಗುತ್ತಿದೆ” ಎಂದು ಸಮರ್ಥಿಸಿಕೊಂಡಿದ್ದರು.

ಈ ಸಂಬಂಧ ಸಮಿತಿಯು ಆ ವರ್ಷದ ಜೂನ್ 8ರಿಂದ ತನಿಖೆಯನ್ನು ಪ್ರಾರಂಭಿಸಿತ್ತು.

ತನಿಖೆಯನ್ನು ಪೂರ್ಣಗೊಳಿಸಿದ್ದ ಸಮಿತಿಯು, “ಮುದ್ಗಲ್ ನಡವಳಿಕೆಯು ಸದನದ ಘನತೆಗೆ ಚ್ಯುತಿ ತರುವಂತಿದ್ದು, ಲೋಕಸಭೆಯ ಮಾನದಂಡಗಳೊಂದಿಗೆ ಹೊಂದಿಕೊಳ್ಳುವುದಿಲ್ಲ” ಎಂದು ವರದಿ ನೀಡಿತ್ತು.

“ಬಾಂಬೆ ಬುಲಿಯನ್ ಅಸೋಸಿಯೇಷನ್ ನ ಅಧ್ಯಕ್ಷರು ಹಾಗೂ ಕೆಲವು ನಿರ್ದೇಶಕರು ಎಚ್‍.ಜಿ.ಮುದ್ಗಲ್ ಪ್ರಕಾಶನದೊಂದಿಗೆ ತಮ್ಮ ಸಂಪರ್ಕದಿಂದ ಹಾಗೂ ಲೋಕಸಭಾ ಸದಸ್ಯರಾದ ಮುದ್ಗಲ್ ಅವರ ಕ್ರಿಯೆಗಳಿಂದ ಉತ್ತಮ ಲಾಭವಾಗಲಿದೆ ಎಂದು ಭಾವಿಸಿದ್ದರು ಎಂಬ ಬಗ್ಗೆ ಯಾವುದೇ ಅನುಮಾನವಿಲ್ಲ” ಎಂದು ಸಮಿತಿಯ ವರದಿಯಲ್ಲಿ ಹೇಳಲಾಗಿತ್ತು.

ಎರಡು ಗಡಿಗಳಾದ ಲೋಕಸಭಾ ಸದಸ್ಯ ಎಚ್.ಜಿ.ಮುದ್ಗಲ್ ಹಾಗೂ ಎಚ್‍.ಜಿ.ಮುದ್ಗಲ್ ಪ್ರಕಾಶನವನ್ನು ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ ಎಂದೂ ಸಮಿತಿಯು ಅಭಿಪ್ರಾಯ ಪಟ್ಟಿತ್ತು.

ಸದ್ಯ ಎಚ್.ಜಿ.ಮುದ್ಗಲ್ ಹಾಗೂ ಮಹುವಾ ಮೊಯಿತ್ರಾ ಉಚ್ಚಾಟನೆ ಪ್ರಕರಣಗಳ ನಡುವೆ ಹೋಲಿಕೆ ಇರುವಂತೆ ತೋರುತ್ತಿದ್ದರೂ, ಮಹುವಾ ಮೊಯಿತ್ರಾ ಉಚ್ಚಾಟನೆ ಪ್ರಕರಣದಲ್ಲಿ ಉಚ್ಚಾಟನೆಗೆ ಸಮರ್ಥನೀಯ ಅಂಶಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿಲ್ಲ, ಹಾಗೂ ಮಹುಆ ಗೆ ತನ್ನ ವಿವರಣೆ ನೀಡಲು ಹಾಗೂ ತನ್ನ ವಿರುದ್ಧ ಆರೋಪ ಮಾಡಿದವರನ್ನು ಪ್ರಶ್ನಿಸಲು ಅವಕಾಶ ನೀಡಿಲ್ಲ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News