ಜನರ ಒಳಿತಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ

Update: 2024-09-12 22:37 IST
ಜನರ ಒಳಿತಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧ : ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ

ಮಮತಾ ಬ್ಯಾನರ್ಜಿ | PC : newindianexpress.com

  • whatsapp icon

ಕೋಲ್ಕತ್ತಾ : ಜನರ ಒಳಿತಾಗಿ ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಘೋಷಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನನಗೂ ಕೂಡಾ ಆರ್ಜಿ ಕರ್ ಆಸ್ಪತ್ರೆಯಲ್ಲಿ ಹತ್ಯೆಗೀಡಾಗಿರುವ ವೈದ್ಯೆಗೆ ನ್ಯಾಯ ದೊರೆಯಬೇಕಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ಆರ್ಜಿ ಕರ್ ಆಸ್ಪತ್ರೆಯ ವೈದ್ಯರ ಮುಷ್ಕರ ಇಂದು ಅಂತ್ಯಗೊಳ್ಳಬಹುದು ಎಂದು ನಿರೀಕ್ಷಿಸಿದ್ದ ಪಶ್ಚಿಮ ಬಂಗಾಳ ಜನತೆಯಲ್ಲಿ ನಾನು ಕ್ಷಮೆ ಕೋರುತ್ತೇನೆ. ಕಿರಿಯ ವೈದ್ಯರು ನಬನ್ನಾಗೆ ಬಂದಿದ್ದರಾದರೂ, ಅವರು ಸಭೆಯಲ್ಲಿ ಭಾಗವಹಿಸಲಿಲ್ಲ. ಕೆಲಸಕ್ಕೆ ಮರಳುವಂತೆ ನಾನು ಅವರಲ್ಲಿ ಮನವಿ ಮಾಡಿದೆ” ಎಂದು ಹೇಳಿದರು.

“ನಾನು ಜನರ ಒಳಿತಿಗಾಗಿ ರಾಜೀನಾಮೆ ಸಲ್ಲಿಸಲು ಸಿದ್ಧನಿದ್ದೇನೆ. ಕಳೆದ ಮೂರು ದಿನಗಳ ನನ್ನ ಉತ್ತಮ ಉದ್ದೇಶ ಹಾಗೂ ಪ್ರಯತ್ನಗಳ ಹೊರತಾಗಿಯೂ ವೈದ್ಯರು ಮಾತುಕತೆ ನಡೆಸಲು ನಿರಾಕರಿಸಿದರು” ಎಂದು ಅವರು ತಿಳಿಸಿದರು.

ಆರ್ಜಿ ಕರ್ ಆಸ್ಪತ್ರೆಯ ಮುಷ್ಕರಕ್ಕೆ ಪರಿಹಾರ ಕಂಡುಕೊಳ್ಳಲು ಪಶ್ಚಿಮ ಬಂಗಾಳ ರಾಜ್ಯ ಕಾರ್ಯಾಲಯದೊಂದಿಗೆ ಮಾತುಕತೆ ನಡೆಸಲು ಪ್ರತಿಭಟನಾನಿರತ ವೈದ್ಯರ ಗುಂಪೊಂದು ನಬನ್ನಾ ತಲುಪಿತಾದರೂ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಮಾತುಕತೆ ನಡೆಸಬೇಕು ಎಂಬ ಪಶ್ಚಿಮ ಬಂಗಾಳ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿತು.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ರಾಜೀನಾಮೆ ಪ್ರಸ್ತಾವ ಮಂಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News