ಮಾ.15ರ ಬಳಿಕ ಪೇಟಿಎಂ ಫಾಸ್ಟ್ಯಾಗ್ ರೀಚಾರ್ಜ್ ಸಾಧ್ಯವಿಲ್ಲ; ಹೊಸದನ್ನು ಖರೀದಿಸುವುದು ಹೇಗೆ?
ಹೊಸದಿಲ್ಲಿ: ಆರ್‌ಬಿಐ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ ಬ್ಯಾಂಕಿಗೆ ಜನವರಿಯಲ್ಲಿ ಆದೇಶಿಸಿದೆ. ಫೆ.29ರಿಂದ ತನ್ನ ಖಾತೆಯಲ್ಲಿ ಅಥವಾ ಜನಪ್ರಿಯ ವ್ಯಾಲೆಟ್‌ನಲ್ಲಿ ಹೊಸದಾಗಿ ಯಾವುದೇ ಠೇವಣಿಗಳನ್ನು ಸ್ವೀಕರಿಸದಂತೆ ಪೇಟಿಎಂ ಸಹಸಂಸ್ಥೆ ಪೇಟಿಎಂ ಪೇಮೆಂಟ್ ಬ್ಯಾಂಕಿಗೆ ಆದೇಶಿಸಲಾಗಿದ್ದರೂ, ಗಡುವನ್ನು ಈಗ ಮಾ.15ಕ್ಕೆ ವಿಸ್ತರಿಸಲಾಗಿದೆ.
ಹೀಗಾಗಿ ಮಾ.15ರ ಬಳಿಕ ಪೇಟಿಎಂ ಫಾಸ್ಟ್ಯಾಗ್‌ನ್ನು ರೀಚಾರ್ಜ್ ಮಾಡಲು ಸಾಧ್ಯವಾಗುವುದಿಲ್ಲ. ಅಸ್ತಿತ್ವದಲ್ಲಿರುವ ಪೇಟಿಎಂ ಫಾಸ್ಟ್ಯಾಗ್‌ಗಳನ್ನು ಈಗಾಗಲೇ ಖಾತೆಯಲ್ಲಿರುವ ಹಣವನ್ನು ಬಳಸಿಕೊಂಡು ಟೋಲ್ ಪ್ಲಾಝಾಗಳಲ್ಲಿ ಬಳಸಬಹುದು,ಆದರೆ ಮಾ.15ರ ಬಳಿಕ ಯಾವುದೇ ಟಾಪ್-ಅಪ್‌ಗಳಿಗೆ ಅವಕಾಶವಿರುವುದಿಲ್ಲ.
ಪೇಟಿಎಂ ಫಾಸ್ಟ್ಯಾಗ್‌ನ್ನು ನಿಷ್ಕ್ರಿಯಗೊಳಿಸುವುದು ಹೇಗೆ?
1. 1800-120-4210ನ್ನು ಡಯಲ್ ಮಾಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ,ವಾಹನದ ನೋಂದಣಿ ಸಂಖ್ಯೆ ಅಥವಾ ಟ್ಯಾಗ್ ಐಡಿಯನ್ನು ಒದಗಿಸಿ.
2. ಪೇಟಿಎಂ ಕಸ್ಟಮರ್ ಸಪೋರ್ಟ್ ಏಜೆಂಟ್ ನಿಮ್ಮ ಫಾಸ್ಟ್ಯಾಗ್ ನಿಷ್ಕ್ರಿಯಗೊಂಡಿದ್ದನ್ನು ಖಚಿತಪಡಿಸುತ್ತಾರೆ.
ಪರ್ಯಾಯವಾಗಿ;
1.ಪೇಟಿಎಂ ಆ್ಯಪ್ ಅನ್ನು ತೆರೆದು ಪ್ರೊಫೈಲ್ ಐಕಾನ್ ಮೇಲೆ ಟ್ಯಾಪ್ ಮಾಡಿ
2.‘ಹೆಲ್ಪ್ ಆ್ಯಂಡ್ ಸಪೋರ್ಟ್’ನ್ನು ಆಯ್ಕಮಾಡಿಕೊಳ್ಳಿ ಮತ್ತು ‘ಬ್ಯಾಂಕಿಂಗ್ ಸೇವೆಗಳು ಮತ್ತು ಪಾವತಿಗಳು-ಫಾಸ್ಟ್‌ಟ್ಯಾಗ್’ಗೆ ಹೋಗಿ.
3.‘ಚಾಟ್ ವಿಥ್ ಅಸ್’ನ್ನು ಕ್ಲಿಕ್ ಮಾಡಿ ಮತ್ತು ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವಂತೆ ಅಧಿಕಾರಿಯನ್ನು ಕೇಳಿಕೊಳ್ಳಿ.
ಆನ್‌ಲೈನ್‌ನಲ್ಲಿ ಹೊಸ ಫಾಸ್ಟ್ಯಾಗ್ ಖರೀದಿಸುವುದು ಹೇಗೆ?
1.ಗೂಗಲ್ ಪ್ಲೇ ಸ್ಟೋರ್ ಅಥವಾ ಆ್ಯಪಲ್ ಆ್ಯಪ್ ಸ್ಟೋರ್‌ನಿಂದ ‘ಮೈ ಫಾಸ್ಟ್ಯಾಗ್’ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ ಮತ್ತು ಇ-ಕಾಮರ್ಸ್ ಲಿಂಕ್‌ಗೆ ಪ್ರವೇಶ ಪಡೆಯಲು ‘ಬಯ್ ಫಾಸ್ಟ್ಯಾಗ್’ ಅನ್ನು ಕ್ಲಿಕ್ ಮಾಡಿ.
2.ಫಾಸ್ಟ್ಯಾಗ್‌ನ್ನು ಖರೀದಿ ಮಾಡಿ ಮತ್ತು ಅದನ್ನು ನಿಮ್ಮ ವಿಳಾಸಕ್ಕೆ ತಲುಪಿಸಲಾಗುತ್ತದೆ.
ಫಾಸ್ಟ್ಯಾಗ್ ಅನ್ನು ಆನ್‌ಲೈನ್ ನಲ್ಲಿ ಸಕ್ರಿಯಗೊಳಿಸುವುದು ಹೇಗೆ?
1. ‘ಮೈ ಫಾಸ್ಟ್ಯಾಗ್ ’ಆ್ಯಪ್‌ನ್ನು ತೆರೆಯಿರಿ ಮತ್ತು ‘ಆ್ಯಕ್ಟಿವೇಟ್ ಫಾಸ್ಟ್ಯಾಗ್’ ಅನ್ನು ಕ್ಲಿಕ್ಕಿಸಿ
2.ಅಮೆಝಾನ್ ಅಥವಾ ಫ್ಲಿಪ್‌ಕಾರ್ಟ್ ಆಯ್ಕೆ ಮಾಡಿ
3.ಫಾಸ್ಟ್ಯಾಗ್ ಐಡಿ ಯನ್ನು ನಮೂದಿಸಿ ಅಥವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ
4.ನಿಮ್ಮ ವಾಹನದ ವಿವರಗಳನ್ನು ನಮೂದಿಸಿ ಮತ್ತು ನಿಮ್ಮ ಹೊಸ ಫಾಸ್ಟ್ಯಾಗ್‌ನ್ನು ಸಕ್ರಿಯಗೊಳಿಸಲಾಗುತ್ತದೆ.
ನೆನಪಿರಲಿ. ಒಂದು ವಾಹನವು ಬಹು ಫಾಸ್ಟ್ಯಾಗ್‌ಗಳನ್ನು ಹೊಂದಲು ಅವಕಾಶವಿಲ್ಲ ಮತ್ತು ವಾಹನಕ್ಕೆ ಲಿಂಕ್ ಆಗಿರುವ ಇತ್ತೀಚಿನ ಫಾಸ್ಟ್ಯಾಗ್ ಮಾತ್ರ ಸಕ್ರಿಯವಾಗಿರುತ್ತದೆ.