ಬಾಂಗ್ಲಾ ಮಹಿಳೆಯರ ವಿರುದ್ಧ ಭಾರತೀಯ ಮಹಿಳೆಯರಿಗೆ 108 ರನ್ ಜಯ

Update: 2023-07-19 18:00 GMT

ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶದ ಮಹಿಳಾ ಕ್ರಿಕೆಟ್ ತಂಡದ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡವು ಬುಧವಾರ 108 ರನ್ಗಳ ಜಯ ಗಳಿಸಿದೆ.

ಗೆಲ್ಲಲು 229 ರನ್ಗಳ ಗುರಿಯನ್ನು ಪಡೆದ ಬಾಂಗ್ಲಾದೇಶದ ಮಹಿಳೆಯರು ಕೇವಲ 35.1 ಓವರ್ಗಳಲ್ಲಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡು 120 ರನ್ಗಳನ್ನಷ್ಟೇ ಗಳಿಸಿದರು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಮತ್ತು ಬಾಂಗ್ಲಾದೇಶ 1-1ರಿಂದ ಸಮಬಲದಲ್ಲಿವೆ. ಟಾಸ್ ಗೆದ್ದ ಬಾಂಗ್ಲಾದೇಶದ ನಾಯಕಿ ನಿಗರ್ ಸುಲ್ತಾನಾ ಮೊದಲು ಎದುರಾಳಿ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದರು.

ಭಾರತವು ಜೆಮಿಮಾ ರೊಡ್ರಿಗಸ್ರ ಭವ್ಯ 86 ರನ್ಗಳ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ಗಳನ್ನು ಕಳೆದುಕೊಂಡು 228 ರನ್ಗಳನ್ನು ಕಲೆಹಾಕಿತು.

ನಾಯಕಿ ಹರ್ಮನ್ಪ್ರೀತ್ ಕೌರ್ 52 ರನ್ಗಳನ್ನು ಗಳಿಸಿದರೆ, ಸ್ಮತಿ ಮಂಧಾನ 36 ಮತ್ತು ಹರ್ಲೀನ್ ದೇವಲ್ 25 ರನ್ಗಳ ದೇಣಿಗೆಗಳನ್ನು ನೀಡಿದರು. ಬಾಂಗ್ಲಾದೇಶದ ಪರವಾಗಿ ಸುಲ್ತಾನಾ ಖಾತುನ್ ಮತ್ತು ನಹೀದಾ ಅಖ್ತರ್ ತಲಾ 2 ವಿಕೆಟ್ಗಳನ್ನು ಉರುಳಿಸಿದರು. ಬಳಿಕ ಗೆಲ್ಲಲು 229 ರನ್ಗಳ ಗುರಿಯನ್ನು ಪಡೆದ ಬಾಂಗ್ಲಾದೇಶ ಮಹಿಳೆಯರಿಗೆ 120 ರನ್ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.

47 ರನ್ ಗಳಿಸಿದ ಫರ್ಗಾನಾ ಹಕ್ ತಂಡದ ಗರಿಷ್ಠ ಸ್ಕೋರ್ದಾರರಾದರು. ಮುರ್ಶಿದಾ ಖಾತುನ್ 12 ರನ್ಗಳನ್ನು ಮಾಡಿದರೆ, ರಿತು ಮೋನಿ 27 ರನ್ಗಳನ್ನು ಗಳಿಸಿದರು. ಉಳಿದ ಬ್ಯಾಟರ್ಗಳಿಗೆ ಎರಡಂಕಿ ಮೊತ್ತ ತಲುಪಲು ಸಾಧ್ಯವಾಗಲಿಲ್ಲ. ಭಾರತದ ಪರವಾಗಿ ಜೆಮಿಮಾ ರೊಡ್ರಿಗಸ್ 4 ವಿಕೆಟ್ಗಳನ್ನು ಉರುಳಿಸಿದರೆ, ದೇವಿಕಾ ವೈದ್ಯ 3 ವಿಕೆಟ್ಗಳನ್ನು ಗಳಿಸಿದರು. ಏಕದಿನ ಸರಣಿ 1-1ರಿಂದ ಸಮಬಲ

ಜೆಮಿಮಾ ರೊಡ್ರಿಗಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು. ಮೊದಲ ಪಂದ್ಯವನ್ನು ಬಾಂಗ್ಲಾದೇಶವು ಡಕ್ವರ್ತ್-ಲೂಯಿಸ್ ಸೂತ್ರದ ಆಧಾರದಲ್ಲಿ 40 ರನ್ಗಳಿಂದ ಗೆದ್ದಿತ್ತು.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News