ಮಂಡ್ಯ | ಮಹಿಳೆಯರು ಬಸ್ಸಿನ ಬಾಗಿಲು ಮುರಿದಿಲ್ಲ, ಸಿಬ್ಬಂದಿ ಅದನ್ನು ಬದಲಾಯಿಸುತ್ತಿದ್ದರು: ಸಾರಿಗೆ ಇಲಾಖೆ ಸ್ಪಷ್ಟನೆ

Update: 2023-06-19 16:59 GMT

ಮಂಡ್ಯ: ಜಿಲ್ಲೆಯ ಮಳವಳ್ಳಿ ಬಸ್‌ ನಿಲ್ದಾಣದಿಂದ ಮೈಸೂರು ಕಡೆಗೆ ಹೊರಟಿದ್ದ ಸಾರಿಗೆ ಸಂಸ್ಥೆ ಬಸ್‌ ಒಂದರ ಬಾಗಿಲು ಅಲುಗಾಡುತ್ತಿತ್ತು. ಕಳಚಿಕೊಳ್ಳುವ ಹಂತದಲ್ಲಿದ್ದ ಆ ಬಾಗಿಲನ್ನು ಚಾಲಕ, ನಿರ್ವಾಹಕ ಬದಲಾಯಿಸಿದ್ದರು. ಆದರೆ, ಬಾಗಿಲನ್ನು ಮಹಿಳೆಯರೇ ಮುರಿದು ಹಾಕಿದರು ಎಂಬ ಸುಳ್ಳು ಸುದ್ದಿ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಈ​ ಸುದ್ದಿಯ ಕುರಿತು ಡಿಪೋ ವ್ಯವಸ್ಥಾಪಕ ಶಿವಕುಮಾರ್ ಪ್ರತಿಕ್ರಿಯಿಸಿದ್ದು,​ ''ಕಳಚಿಕೊಳ್ಳುವ ಹಂತದಲ್ಲಿದ್ದ ಬಸ್​ನ ಡೋರ್​ಅನ್ನು ಚಾಲಕ ಹಾಗೂ ನಿರ್ವಾಹಕ ಮುಂಜಾಗ್ರತ ಕ್ರಮವಾಗಿ ಅದನ್ನು ಬದಲಾಯಿಸಿದ್ದಾರೆ. ಮಹಿಳೆಯರೇ ಬಸ್​ನ ಡೋರ್​ ಮುರಿದರು ಎಂದರೆ ಅದು ಸತ್ಯಕ್ಕೆ ದೂರವಾದ ಮಾತು'' ಎಂದು ಸ್ಪಷ್ಟಪಡಿಸಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News