ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಶಾರುಖ್ ಖಾನ್ : ವರದಿ

Update: 2023-07-04 08:05 GMT

ಶಾರುಖ್ ಖಾನ್, ಫೋಟೋ PTI 

ಹೊಸದಿಲ್ಲಿ: ಲಾಸ್ ಏಂಜಲೀಸ್ ನಲ್ಲಿ ಚಿತ್ರೀಕರಣದ ವೇಳೆ ಅಪಘಾತಕ್ಕೀಡಾದ ಶಾರುಖ್ ಖಾನ್ ಅವರು ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಎಂದು ETimes ವರದಿ ಮಾಡಿದೆ.

ವರದಿಯ ಪ್ರಕಾರ, ನಟ ಭಾರತಕ್ಕೆ ಮರಳಿದ್ದಾರೆ ಮತ್ತು ಅವರು ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

"ಶಾರುಖ್ ಖಾನ್ ಅವರು ಪ್ರಾಜೆಕ್ಟ್ ಗಾಗಿಲಾಸ್ ಏಂಜಲೀಸ್ ನಲ್ಲಿ ಚಿತ್ರೀಕರಣ ನಡೆಸುತ್ತಿದ್ದರು ಹಾಗೂ ಆಗ ಅವರ ಮೂಗಿಗೆ ಗಾಯವಾಗಿದೆ. ರಕ್ತಸ್ರಾವವಾಗಲು ಆರಂಭಿಸಿದ ನಂತರ ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆತಂಕಪಡುವ ಅಗತ್ಯವಿಲ್ಲ ಕಿಂಗ್ ಖಾನ್ ರಕ್ತಸ್ರಾವವನ್ನು ನಿಲ್ಲಿಸಲು ಒಂದು ಸಣ್ಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ವೈದ್ಯರು ಶಾರುಖ್ ಖಾನ್ ಟೀಮ್ ಗೆ ತಿಳಿಸಿದರು. ಆಪರೇಷನ್ ನಂತರ ಶಾರುಖ್ ಅವರ ಮೂಗಿನ ಮೇಲೆ ಬ್ಯಾಂಡೇಜ್ ಕಾಣಿಸಿಕೊಂಡಿದೆ"ಎಂದು ಮೂಲಗಳನ್ನು ಉಲ್ಲೇಖಿಸಿ ETimes ವರದಿ ಮಾಡಿದೆ

ವೃತ್ತಿಪರವಾಗಿ  ಶಾರುಖ್ ಖಾನ್ 2023ನೇ ವರ್ಷವನ್ನು ಅಬ್ಬರದಿಂದ ಅರಂಭಿಸಿದರು. ಅವರ ಅಭಿನಯದ 'ಪಠಾಣ್' ಚಿತ್ರ ಭರ್ಜರಿ ಹಿಟ್ ಆಗಿತ್ತು. ಶಾರುಖ್ ಖಾನ್ ಅವರು ರಾಜ್ ಕುಮಾರ್ ಹಿರಾನಿಯವರ 'ಡುಂಕಿ' ಚಿತ್ರದಲ್ಲಿ ತಾಪ್ಸಿ ಪನ್ನು ಸಹ-ನಟಿಯಾಗಿ ನಟಿಸಲಿದ್ದಾರೆ, ಇದು ಈ ವರ್ಷ ಬಿಡುಗಡೆಯಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Sathish

contributor

Byline - ವಾರ್ತಾಭಾರತಿ

contributor

Similar News