ಅಮಾನತ್ ಬ್ಯಾಂಕ್ ಕುರಿತ ಈ ವೀಡಿಯೋ ನಕಲಿ

Update: 2024-04-25 12:54 GMT

ಇಂದು ವಾಟ್ಸಪ್ ನಲ್ಲಿ ಒಂದು ವಿಡಿಯೊ ನೋಡಿದೆ ಅದರಲ್ಲಿ ಕೆಲವು ಮುಸ್ಲಿಮ್ ಮಹಿಳೆಯರು ಪ್ಲೇ ಕಾರ್ಡ್ ಹಿಡಿದುಕೊಂಡು ಬೆಂಗಳೂರಿನಲ್ಲಿರುವ ಅಮಾನತ್ ಬ್ಯಾಂಕ್ ವಿರುದ್ಧ ಘೋಷನೆ ಕೂಗುತ್ತ ನಮ್ಮ ದುಡ್ಡು ನಮಗೆ ಸಿಗಬೇಕು, ಈ ಬ್ಯಾಂಕಿನ ಹಗರಣದಲ್ಲಿ ಕಾಂಗ್ರೆಸ್ ಅಭೈರ್ಥಿ ಮನ್ಸೂರ್ ಅಲಿ ಖಾನ್ ಹಾಗೂ ಅವರ ತಂದೆ ಮಾಜಿ ಕೇಂದ್ರ ಸಚಿವ ಕೆ. ರೆಹ್ಮಾನ್ ಖಾನ ಅವರ ಕೈವಾಡವಿದೆ ಎಂದು ಪ್ರತಿಭಟಿಸುತ್ತಿದ್ದರು. ಆದರೆ ವಾಸ್ತವ ಸಂಗತಿಯೇ ಬೇರೆ ಇದೆ, ಅಮಾನತ್ ಬ್ಯಾಂಕ್ ಪುನರ್ ಆರಂಭವಾಗಿ ಈಗಾಗಲೇ ಎರಡು ವರ್ಷಕ್ಕು ಹೆಚ್ಚು ಕಳೆದಿವೆ. ನಾನು ಸೇರಿದ ಸಂಸ್ಥೆಯೊಂದರ ಹಣ ಅಲ್ಲಿ ಡಿಪಾಸಿಟ್‌ಆಗಿ ಇಡಲಾಗಿತ್ತು. ಕಳೆದ ವರ್ಷವೇ ಪೂರ್ತಿ ಹಣ ಬ್ಯಾಂಕಿನಿಂದ ನಮಗೆ ಸಂದಾಯವಾಗಿವೆ. ಅದೇ ರೀತಿ ವಯಕ್ತಿಕವಾಗಿ ಹಣ ಇಟ್ಟವರೂ ಕೂಡಾ ಅದನ್ನು ಮರಳಿ ಪಡಿಯುತ್ತಿದ್ದು ಬ್ಯಾಂಕಿನ ವಹಿವಾಟು ಎಂದಿನಂತೆ ನಿತ್ಯ ನಡೆಯುತ್ತಿದೆ. ಬ್ಯಾಂಕ್ ಈಗಲೂ ತೆರೆದೇ ಇದ್ದು ನಿತ್ಯ ವಹಿವಾಟು ನಡೆಯುತ್ತಿದೆ, ಆದರೆ ಕೆಲವು ದುಷ್ಟ ಶಕ್ತಿಗಳು ತಮ್ಮ ಸುಳ್ಳಿನ ಕಾರ್ಖಾನೆ ಯಿಂದ ಇಂತಹ ವಿಡಿಯೋಗಳನ್ನು ರಚಿಸಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ, ಆದ್ದರಿಂದ ಜನರು ಯಾವುದೇ ಗೊಂದಲಕ್ಕೀಡಾಗದೇ ಇಂತಹ ಸುಳ್ಳು ಸುದ್ದಿಗಳನ್ನು ಕಡೆಗನಿಸಬೇಕು.

Writer - ವಾರ್ತಾಭಾರತಿ

contributor

Editor - Ismail

contributor

Contributor - -ರಿಯಾಝ್ ಅಹ್ಮದ್ ರೋಣ

contributor

Similar News