ಪ್ರಾಧಿಕಾರ: ನಿರೀಕ್ಷೆಗಳು

Update: 2024-06-15 10:05 GMT

ನಾಡಿನ ಹಿರಿಯ ಸಂಸ್ಕೃತಿ ತಜ್ಞ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆಯವರು ರಾಜ್ಯ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದುದಕ್ಕೆ ಅವರಿಗೆ ಅಭಿನಂದನೆಗಳು.

ಈ ಸಂದರ್ಭದಲ್ಲಿ ನಿರೀಕ್ಷೆಗಳು ಸಹಜ. ಒಂದೆರಡು ಅನಿಸಿಕೆ, ಮಾಡಬಹುದಾದ ಕೆಲಸಗಳ ಬಗ್ಗೆ ಕಿರು ಟಿಪ್ಪಣಿ:

1. ಅಂಗಡಿ ಸಂಸ್ಥೆ, ಸಂಕೀರ್ಣಗಳ ನಾಮಫಲಕಗಳೆಲ್ಲದರಲ್ಲಿ ಶೇ. 60 ಕನ್ನಡದ ನಿಯಮದ ಜೊತೆಗೆ ಎಲ್ಲಾ ಫಲಕ, ಬೋರ್ಡುಗಳಲ್ಲಿ ದೊಡ್ಡದಾಗಿ ಊರು, ಪಿನ್ ಸಂಖ್ಯೆ ನಮೂದನ್ನು ಕಡ್ಡಾಯ ಗೊಳಿಸುವುದು. ಇದು ಪ್ರಯಾಣಿಕರ ಅರಿವು, ಭದ್ರತೆ(ಸೆಕ್ಯೂರಿಟಿ), ವಿಚಾರಣಾ ದಾಖಲೆಗಳಿಗೆ ತುಂಬಾ ಉಪಕಾರಿ.

2. ಪಾರಂಪರಿಕ ಕಲೆಗಳ (ಯಕ್ಷಗಾನ ಇತ್ಯಾದಿ) ಪ್ರಕಾರಗಳು, ಆಚರಣೆಗಳು, ಅದರ ಭಾಷಿಕ ದಾಖಲೀಕರಣ/ವಿಶ್ಲೇಷಣೆಗಳ ಮೂಲಕ ಭಾಷಾ ಅಭಿಜಾತ್ಯ (ಶಾಸ್ತ್ರೀಯತೆ ದೃಷ್ಟಿಯ ವಿಚಾರ) ಪ್ರಕಟಣೆ.

3. ಸಮಗ್ರ ಕನ್ನಡ ಭಾಷೆ, ಉಪಭಾಷೆ, ಉಪೋಪಭಾಷೆಗಳ ಮೌಖಿಕ ರೂಪಗಳ ವ್ಯವಸ್ಥಿತ ಧ್ವನಿ ಮುದ್ರಣ ಸಂಪದದ ತಯಾರಿ.

4. ಖಾಸಗಿ ಅನುದಾನಿತ ಕನ್ನಡ ಅರ್ಥನಿಕ ಶಾಲೆಗಳಿಗಾಗಿ ಕ್ರಿಯಾ ಯೋಜನೆ.

-ಡಾ.ಎಂ. ಪ್ರಭಾಕರ ಜೋಶಿ,

ಮಂಗಳೂರು

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News