ಶಿಕ್ಷಣ ಮತ್ತು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ಸಿಗಲಿ

Update: 2023-07-07 05:33 GMT

ಮಾನ್ಯರೇ,

ಹೊಸ ಸರಕಾರದ ಮೊದಲ ಬಜೆಟನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನ ಸಭೆಯಲ್ಲಿ ಮಂಡಿಸಲಿದ್ದಾರೆ.

ಮಾನ್ಯ ಮುಖ್ಯ ಮಂತ್ರಿಗಳು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ರಾಜ್ಯ ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಟ್ಟಾಗ ಮಾತ್ರ ಹೊಸ ಸಮಾಜವೊಂದನ್ನು ನಿರ್ಮಾಣ ಮಾಡಲು ಸಾಧ್ಯ.

ಈ ಬಜೆಟ್‌ನಲ್ಲಿ ಸೇರಿಸಲೇ ಬೇಕಾದ ಮುಖ್ಯ ಅಂಶಗಳೆಂದರೆ.

* ರಾಜ್ಯದಲ್ಲಿ ಮಾಹಿತಿಯೊಂದರ ಪ್ರಕಾರ 4,600 ಸರಕಾರಿ ಶಾಲೆಗಳು ಬಿದ್ದು ಹೋಗುವ ಹಂತದಲ್ಲಿದ್ದು, ಈ ಎಲ್ಲಾ ಶಾಲೆಗಳಿಗೆ ಹೊಸ ಕಟ್ಟಡಗಳು ನಿರ್ಮಾಣ ಮಾಡುವಂತಾಗಬೇಕು.

* ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರು ಸೇರಿದಂತೆ ಎಲ್ಲಾ ವಿಷಯಗಳ ಶಿಕ್ಷಕರ ನೇಮಕವಾಗಬೇಕು.

* ಎಲ್ಲಾ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ವ್ಯವಸ್ಥಿತ ಶೌಚಾಲಯ ನಿರ್ಮಾಣವಾಗಬೇಕು.

* ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ಕಟ್ಟಡಗಳಿಗೆ ಸುಣ್ಣ-ಬಣ್ಣ ಬಳಿಯುವ ಕೆಲಸವಾಗ ಬೇಕಾಗಿದೆ.

* ಗ್ರಾಮೀಣ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸಬೇಕು.

* ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಘಟಕಗಳಲ್ಲಿ ಉಚಿತ ಗುಣಮಟ್ಟದ ವೈದ್ಯಕೀಯ ಸೇವೆ ರೋಗಿಗಳಿಗೆ ಸಿಗುವಂತಾಗಬೇಕು.

* ವೈದ್ಯರು ಕೇಂದ್ರ ಸ್ಥಾನದಲ್ಲಿದ್ದು ಕಾರ್ಯ ನಿರ್ವಹಿಸುವಂತಾಗಬೇಕು.

* ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಿ ಮಹಿಳಾ ವೈದ್ಯರನ್ನು ನೇಮಕ ಮಾಡಬೇಕು.

* ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ, ಹೊರಗಡೆಯಿಂದ ಯಾವುದೇ ಔಷಧಗಳನ್ನು ತರಿಸದಂತೆ, ಆಸ್ಪತ್ರೆಯಲ್ಲೇ ಔಷಧ ವ್ಯವಸ್ಥೆ ಇರಬೇಕು.

* ಆಸ್ಪತ್ರೆಗಳಲ್ಲಿ ಶುಚಿತ್ವವನ್ನು ಕಾಪಾಡಲು ಹೆಚ್ಚಿನ ಆದ್ಯತೆ ನೀಡಬೇಕು.

ಈ ಎಲ್ಲಾ ಅಂಶಗಳಿಗೆ ಮಾನ್ಯ ಮುಖ್ಯಮಂತ್ರಿಗಳು ಗಮನ ನೀಡಬೇಕಾಗಿ ವಿನಂತಿ.

ಬೂಕನಕೆರೆ ವಿಜೇಂದ್ರ,

ಕುವೆಂಪು ನಗರ, ಮೈಸೂರು

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ಬೂಕನಕೆರೆ ವಿಜೇಂದ್ರ

contributor

Similar News