ಸಾಮಾನ್ಯ ದರ್ಜೆಯ ಬೋಗಿಗಳನ್ನು ಹೆಚ್ಚಿಸಿ

Update: 2024-03-23 09:50 GMT

ಮಾನ್ಯರೇ,

ಕಲಬುರಗಿಯಿಂದ-ಬೆಂಗಳೂರು ಪ್ರಯಾಣಕ್ಕಾಗಿ ವಂದೇ ಭಾರತ್ ರೈಲು ಈಗ ಸುದ್ದಿ ಮಾಡುತ್ತಿದೆ. ಆದರೆ ಈ ವಂದೇ ಭಾರತ್ ರೈಲು ಯಾರ ಹಿತಕ್ಕಾಗಿ? ಸಾಮಾನ್ಯ ಜನರು ಈ ರೈಲು ಸೇವೆ ದಕ್ಕಿಸಿಕೊಳ್ಳಬಹುದೇ?

ಆ ರೈಲನ್ನು ಆರಂಭಿಸುವ ಬದಲು ದಶಕದ ಕೂಗಾದ ಈಗಾಗಲೇ ಇರುವ ಉದ್ಯಾನ ಎಕ್ಸ್‌ಪ್ರೆಸ್, ಸೋಲಾಪುರ ಎಕ್ಸ್‌ಪ್ರೆಸ್, ಬಸವ ಎಕ್ಸ್‌ಪ್ರೆಸ್ ಮುಂತಾದ ರೈಲುಗಳಿಗೆ ಸಾಮಾನ್ಯ ದರ್ಜೆಯ ಬೋಗಿಗಳನ್ನು ಹೆಚ್ಚಿಸಿದ್ದಲ್ಲಿ ಸಾಮಾನ್ಯ ಜನರಿಗೆ ಅನುಕೂಲವಾದೀತು.

ಜನರಲ್ ಬೋಗಿಯಲ್ಲಿ ಕುಳಿತುಕೊಳ್ಳಲು ಆಸನ ಸಿಗದೆ ಹೊಡೆದಾಡುವ ವೀಡಿಯೋಗಳು, ಪಾಯಿಖಾನೆಗಳ ಎದುರಿಗೆ ಮಲಗಿ ಪ್ರಯಾಣ ಮಾಡುವವರ ಫೋಟೊ ಸಹಿತ ಸುದ್ದಿಗಳು ದಿನನಿತ್ಯ ವರದಿಯಾಗುತ್ತಿವೆ. ಇದು ರಾಜಕಾರಣಿಗಳ ಕಣ್ಣಿಗೆ ಕಾಣಿಸುತ್ತಿಲ್ಲವೇ?

ಆದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು ಸಾವಿರಾರು ಸಾಮಾನ್ಯ ಜನರ ಹಿತಕ್ಕಾಗಿ ಎಕ್ಸ್‌ಪ್ರೆಸ್ ರೈಲುಬೋಗಿಗಳನ್ನು ಹೆಚ್ಚಿಸಲು ಪ್ರಯತ್ನಮಾಡಬೇಕಾಗಿದೆ.

-ರೇಣುಕಾ

ಕಲಬುರಗಿ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News