ಖತರ್: SKMWA ವತಿಯಿಂದ ನ.24 ರಂದು ಪುರುಷರ ಕಬಡ್ಡಿ ಪಂದ್ಯಾಟ

Update: 2023-11-01 14:42 IST
ಖತರ್: SKMWA ವತಿಯಿಂದ ನ.24 ರಂದು ಪುರುಷರ ಕಬಡ್ಡಿ ಪಂದ್ಯಾಟ
  • whatsapp icon

ದೋಹಾ: ಸೌತ್ ಕೆನರಾ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್(SKMWA), ದೋಹಾ ಕತಾರ್ ಪುರುಷರ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಹಮ್ಮಿಕೊಂಡಿದೆ. ವಿದೇಶದಲ್ಲಿ ಕಬಡ್ಡಿ ಕ್ರೀಡೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ಮತ್ತು ಸಂಘಟನೆಯ ಸಮಾಜ ಸೇವಾ ಕಾರ್ಯಗಳನ್ನು ಪ್ರಚುರಪಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

  ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 7 ವರೆಗೆ ಅಸ್ಪೈರ್ ಡೋಮ್ ಒಳಾಂಗಣ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ ಎಂದು ಆಯೋಜಕರು ಸುದ್ದಿಗೋಷ್ಠಿಯಲ್ಲಿ  ತಿಳಿಸಿದ್ದಾರೆ.

ಪ್ರತಿಷ್ಠಿತ 10 ತಂಡಗಳ ನಡುವೆ ನಡೆಯುವ ಈ ಕಾರ್ಯಕ್ರಮಕ್ಕೆ ಗಣ್ಯ ಅತಿಥಿಗಳು ಮತ್ತು ವಿವಿಧ ಸಂಘಟನೆಗಳ ಮುಖ್ಯಸ್ಥರು ಆಗಮಿಸಲಿದ್ದಾರೆ.

1992 ರಲ್ಲಿ ಸ್ಥಾಪನೆಗೊಂಡ ಈ ಸಂಘಟನೆ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದೆ .

ಪತ್ರಿಕಾಗೋಷ್ಠಿಯಲ್ಲಿ SKMWA ಅಧ್ಯಕ್ಷ ಅಬ್ದುಲ್ ರಝಾಕ್ ಪುತ್ತೂರು, ಉಪಾಧ್ಯಕ್ಷ ಕಾಸಿಂ ಉಡುಪಿ, ಪ್ರಧಾನ ಕಾರ್ಯದರ್ಶಿ ಇಮ್ರಾನ್ ಬಂಟ್ವಾಳ, ಸಲಹಾ ಸಮಿತಿಯ ಮುಖ್ಯಸ್ಥರಾದ ಅಬ್ದುಲ್ಲಾ ಮೋನು ಮೊಯ್ದಿನ್, ಸುಹೈಬ್ ಅಹ್ಮದ್ ಪಾಂಡೇಶ್ವರ, ಕ್ರೀಡಾ ವಿಭಾಗದ ಮನ್ಸೂರ್, ರಶೀದ್ ಕಕ್ಕಿಂಜೆ, ಸಮೀರ್ ಮಾಹಿನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News