ರಾಯಚೂರು | ಒಂದೇ ದಿನದಲ್ಲಿ 1.79 ಕೋಟಿ ರೂ. ತೆರಿಗೆ ವಸೂಲು
ರಾಯಚೂರು : ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ತೆರಿಗೆ ವಸೂಲಾತಿ ಅಭಿಯಾನ ಆರಂಭಿಸಲಾಗಿದ್ದು, ಶುಕ್ರವಾರ ಒಂದೇ ದಿನ 1.79 ಕೋಟಿ ರೂ. ದಾಖಲೆಯ ತೆರಿಗೆ ವಸೂಲಿಯಾಗಿದೆ.
ರಾಯಚೂರಿನಲ್ಲಿ 64,11,987 ರೂ., ಸಿಂಧನೂರಿನಲ್ಲಿ 41,48,443 ರೂ., ಮಸ್ಕಿ 18,03,540 ರೂ., ಮಾನ್ವಿ 16,21,941 ರೂ., ದೇವದುರ್ಗದಲ್ಲಿ 7,48,720 ರೂ., ಲಿಂಗಸೂಗೂರಲ್ಲಿ 12,05,943 ರೂ., ಸಿರವಾರದಲ್ಲಿ 11,55,254 ರೂ. ಹಾಗೂ ಅರಕೇರಾದಲ್ಲಿ 8,07,994 ರೂ. ಸೇರಿದಂತೆ ಒಟ್ಟು ಮೊತ್ತ ರೂ.1.79 ಕೋಟಿ ರೂ. ಸಂಗ್ರಹಿಸಿ, ನಿಗದಿತ ಗುರಿಗಿಂತ ಹೆಚ್ಚು ತೆರಿಗೆ ವಸೂಲಿ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ತುಕಾರಾಂ ಪಾಡ್ವೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಯಚೂರು ತಾಲೂಕಿನ ಮರ್ಚಟ್ಹಾಳ ಮತ್ತು ಮನ್ಸಲಾಪೂರು ಪಂಚಾಯತ್ಗಳು 101 ರಷ್ಟು, ಮಾನ್ವಿ ಯ ನಕ್ಕುಂದ ಪಂಚಾಯಿತಿ ಶೇ.97.72, ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಶೇ.93.18, ಮಸ್ಕಿ ತಾಲ್ಲೂಕಿನ ವಟಗಲ್ ಶೇ.83.77, ಲಿಂಗಸೂಗೂರು ತಾಲ್ಲೂಕಿನ ನಾಗರಹಾಳ ಶೇ.61.15, ಸಿರವಾರ ತಾಲೂಕಿನ ಮಲ್ಲಟ ಪಂಚಾಯತ್ ಶೇ.91.11, ಅರಕೇರಾ ತಾಲ್ಲೂಕಿನ ಮಲದಕಲ್ ಶೇ.86.28, ಹಾಗೂ ದೇವದುರ್ಗ ತಾಲ್ಲೂಕಿನ ಹೇಮನಾಳ ಪಂಚಾಯತ್ ಶೇ.57.24 ರಷ್ಟು ಕರ ವಸೂಲಾತಿ ಮಾಡಲಾಗಿದ್ದು, ಕರ ವಸೂಲಿಯ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿದ್ದಾರೆ.