ರಾಯಚೂರು | ಡ್ರೋನ್ ತರಬೇತಿಗೆ ಅರ್ಜಿ ಆಹ್ವಾನ

Update: 2024-11-29 14:26 GMT

ರಾಯಚೂರು : ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಡ್ರೋನ್ ಆಧಾರಿತ ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಉದ್ಯೋಗ ಪಡೆಯಲು ಪರಿಶಿಷ್ಟ ಪಂಗಡದ ಯುವಕ ಅಥವಾ ಯುವತಿಯರಿಗೆ ಡ್ರೋನ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ತರಬೇತಿ ಪಡೆಯಲು ಕನಿಷ್ಟ 18 ವರ್ಷ, ಪುರುಷರಿಗೆ ಗರಿಷ್ಟ 35 ವರ್ಷ ಹಾಗೂ ಮಹಿಳೆಯರಿಗೆ ಗರಿಷ್ಟ 40 ವರ್ಷಗಳು ಮೀರತಕ್ಕದ್ದಲ್ಲ. ಅಭ್ಯರ್ಥಿಯ ಕುಟುಂಬದ ಆದಾಯ 2.50 ಲಕ್ಷ ಮೀರಿರಬಾರದು.

ಅಭ್ಯರ್ಥಿಗೆ ತರಬೇತಿ ಅವಧಿಯಲ್ಲಿ ಯಾವುದೇ ಶಿಷ್ಯವೇತನ ನೀಡುವುದಿಲ್ಲ. ಈ ಎಲ್ಲ ಷರತ್ತುಗೊಳ್ಳಪಟ್ಟ ಆಸಕ್ತ ಪರಿಶಿಷ್ಟ ವರ್ಗದ ಯುವಕ ಅಥವಾ ಯುವತಿಯರು ಜಿಲ್ಲಾ ಅಥವಾ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ನವೆಂಬರ್ 12ರೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News