ರಾಯಚೂರು | ಭೂಸ್ವಾಧೀನ ಪರಿಹಾರ ವಿಳಂಬಕ್ಕೆ ನ್ಯಾಯಾಲಯದಿಂದ ಜಪ್ತಿ ಆದೇಶ

Update: 2024-11-30 16:09 GMT

ರಾಯಚೂರು : ಏತ ನೀರಾವರಿಗಾಗಿ ರೈತರ ಭೂ ಸ್ವಾಧೀನಪಡಿಸಿಕೊಂಡು ರೈತರಿಗೆ ನೀಡಬೇಕಾದ ಪರಿಹಾರ ಹಣವನ್ನು ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯವು ರಾಯಚೂರು ಸಹಾಯಕ ಆಯುಕ್ತ ಕಚೇರಿಯ ಜಪ್ತಿ ಆದೇಶದ ಹೊರಡಿಸಿದ ಆದೇಶದ ಅನ್ವಯ ಶನಿವಾರ ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ ಹಾಗೂ ರೈತರ ಪರ ವಕೀಲರು ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ಮುಂದಾಗಿರುವ ಪ್ರಸಂಗ ನಡೆಯಿತು.

ಜಿಲ್ಲೆಯ ಸಿರವಾರ ತಾಲ್ಲೂಕಿನ ಮಾಡಗಿರಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 2009ರಲ್ಲಿ ಹಳ್ಳದಿಂದ ಏತ ನೀರಾವರಿ ಯೋಜನೆಗಾಗಿ ಸುಮಾರು 33 ಎಕರೆ ಪ್ರದೇಶದ ಭೂಮಿಯನ್ನು ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದರು. ಅಂದಿನ ಪರಿಹಾರ ಕಡಿಮೆಯಾಗಿದೆ ಎಂದು ರೈತರು ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ನಂತರ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಸಿತು.

ಪ್ರತಿ ಎಕರೆಗೆ 2.50 ಲಕ್ಷ ರೂ. ನಿಗದಿಪಡಿಸಿದ 2009ರಿಂದ ಬಡ್ಡಿಯೊಂದಿಗೆ ರೈತರಿಗೆ ಪರಿಹಾರ ನೀಡಬೇಕು ಎಂಬ ಆದೇಶವನ್ನು ನ್ಯಾಯಾಲಯವು ತೀರ್ಪು ನೀಡಿತು.

ಸಹಾಯಕ ಆಯುಕ್ತ ಅಥವಾ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಾಗಲಿ ಸ್ಪಂದಿಸದ ಹಿನ್ನೆಲೆಯಲ್ಲಿ ರೈತರ ಪರ ವಕೀಲ ಅವರು ನ್ಯಾಯಾಲಯಕ್ಕೆ ಗಮನಕ್ಕೆ ತಂದಿದ್ದಾರೆ. ಈ ಕಾರಣದಿಂದ ಈ ಬಗ್ಗೆ ನ್ಯಾಯಾಲಯವು ಆಯುಕ್ತರ ಕಚೇರಿಯ ಜಪ್ತಿಗಾಗಿ ವಾರಂಟ್ ಜಾರಿಗೊಳಿಸಿತು.

ಈ ಹಿನ್ನೆಲೆಯಲ್ಲಿ ರಾಯಚೂರು ಸಹಾಯಕ ಆಯುಕ್ತರ ಕಚೇರಿಯ ಪೀಠೋಪಕರಣಗಳನ್ನು ಜಪ್ತಿ ಮಾಡಲು ಮುಂದಾದಾಗ ಎಚ್ಚೆತ್ತುಕೊಂಡು ಸಹಾಯಕ ಆಯುಕ್ತ ಗಜಾನನ ಬಾಳೆ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಶೀಘ್ರದಲ್ಲಿ ರೈತರ ಪರಿಹಾರ ಹಣವನ್ನು ಜಮಾ ಮಾಡಲಾಗುವುದು ಎಂದು ಭರವಸೆ ನೀಡಿದ ಕಾರಣ, ನ್ಯಾಯಾಲಯವು ಸಿಬ್ಬಂದಿ ಹಾಗೂ ರೈತರಪರ ವಕೀಲರು ಜಪ್ತಿಯನ್ನು ಸ್ಥಗಿತಗೊಳಿಸಿದರು.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News