ನೀನಾಸಂ ತಿರುಗಾಟ; ಹೊಸ ಗಾಳಿ ತರಬಲ್ಲದೆ?

Update: 2024-01-13 05:53 GMT

ನಾಟಕ: ಹುಲಿಯ ನೆರಳು

ರಚನೆ: ಚಂದ್ರಶೇಖರ ಕಂಬಾರ

ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿ

ಬಿ.ವಿ.ಕಾರಂತರು ನಿರ್ದೇಶಿಸಿದ ಪುತಿನ ಅವರ ‘ಗೋಕುಲ ನಿರ್ಗಮನ’ ನಾಟಕವು ನಮ್ಮೊಳಗಿನ ಭಾವದ ತಂತುಗಳನ್ನು ಮೀಟುತ್ತದೆ. ಈ ನಾಟಕದ ಕೊಳಲು ಮಹಾತ್ಮಾ ಗಾಂಧಿ, ಅಂಬೇಡ್ಕರ್, ರವೀಂದ್ರನಾಥ್ ಟಾಗೋರ್ ಅವರನ್ನು ಸಂಕೇತಿಸುತ್ತದೆ. ಅವರೆಲ್ಲ ನಮ್ಮ ಕಣ್ಣಮುಂದೆಯೇ ಹಾದುಹೋಗುತ್ತಾರೆ ಜೊತೆಗೆ ನಮ್ಮ ತಾಯಿ, ಅಕ್ಕಮಹಾದೇವಿ ಕಾಣುತ್ತಾಳೆ. ಹೀಗೆ ನಾಟಕವೊಂದು ಬೇರೆ ಬೇರೆ ಭಾವ ಹಾಗೂ ಮಜಲುಗಳನ್ನು ದಾಟಬೇಕು. ಹಾಗೆ ದಾಟದಿದ್ದರೆ ನಾಟಕ ತಟ್ಟುವುದಿಲ್ಲ. ಹೀಗೆಂದಾಗ ಬಿ.ವಿ.ಕಾರಂತರ ನಾಟಕಗಳು ಮಾತ್ರ ಕಾಣುತ್ತವೆ ಎಂಬ ಆರೋಪ ಹೊರಿಸದಿರಿ. ಈಚೆಗೆ ಕೆ.ಪಿ.ಲಕ್ಷ್ಮಣ್ ನಿರ್ದೇಶನದ ‘ದಕ್ಲ ಕಥಾ ದೇವಿಕಾವ್ಯ’ ನಾಟಕ ಉದಾಹರಿಸಬಹುದು. ಹೀಗೆಯೇ ಮೈಸೂರಿನ ರಂಗಾಯಣದ ಅನೇಕ ನಾಟಕಗಳನ್ನು ಉದಾಹರಿಸಬಹುದು; ‘ಗಾಂಧಿ ವರ್ಸಸ್ ಗಾಂಧಿ’, ‘ಚಿರೇಬಂದಿವಾಡೆ’, ‘ಹ್ಯಾಮ್ಲೆಟ್’, ‘ಮಲೆಗಳಲ್ಲಿ ಮದುಮಗಳು’ ಮೊದಲಾದವು. ಈ ನಾಟಕಗಳು ನೆನಪಲ್ಲಿ ಉಳಿದಿದ್ದರೆ ಕಲಾವಿದರ ಅಭಿನಯವೇ ಕಾರಣ.

ಉರು ಹೊಡೆದ ಸಂಭಾಷಣೆ, ವೇಗವಾಗಿ ಮಾತುಗಳನ್ನು ಒಪ್ಪಿಸುವ ಗಡಿಬಿಡಿ, ಪಾತ್ರಗಳನ್ನು ಅನುಭವಿಸದೆ ಅಭಿನಯಿಸಿದ ಪರಿಣಾಮ, ಪರಿಣಾಮ ಬೀರದ ನೀನಾಸಂ ನಾಟಕಗಳು ಎನ್ನುವುದನ್ನು ವಿಷಾದದಿಂದ ಹೇಳುವೆ. ಹೀಗೆಂದಾಗ ನಿರ್ದೇಶಕರಾದ ಕೆ.ಜಿ.ಕೃಷ್ಣಮೂರ್ತಿ ಹಾಗೂ ಎಚ್.ಕೆ.ಶ್ವೇತಾರಾಣಿ ಅವರನ್ನು ಅಲ್ಲಗಳೆಯುತ್ತಿಲ್ಲ. ನೀನಾಸಂಗೆ ಆಯ್ಕೆಗೊಂಡ ನಂತರದ ಒಂದು ವರ್ಷದ ತರಬೇತಿ ಬಳಿಕ ತಿರುಗಾಟಕ್ಕೆ ಅಣಿಯಾಗುವಲ್ಲಿನ ಪ್ರಯಾಣ ಇದ್ದೇ ಇರುತ್ತದೆ. ಈ ಪ್ರಯಾಣದಲ್ಲಿ ನಟರಿಗೆ ಧ್ವನಿವ್ಯಾಯಾಮ ಸಿಕ್ಕಿರುತ್ತದೆ. ಜೊತೆಗೆ ಅಭಿನಯಕ್ಕೆ ಪೂರಕವಾದ ತರಬೇತಿಯೂ ಸಿಕ್ಕಿರುತ್ತದೆ. ಇಷ್ಟಾದರೂ ನಟರ ಅಭಿನಯಕ್ಕೆ ಒತ್ತು ಕೊಡುವುದು ಕಡಿಮೆಯಾಗುತ್ತಿದೆಯೇ? ನೀನಾಸಂನ ಒಳ್ಳೆಯ ನಾಟಕಗಳನ್ನು ಲಾಗಾಯ್ತಿನಿಂದ ನೋಡುತ್ತ ಬಂದಿರುವ ನನಗೆ ಈ ಬಾರಿಯ ನಾಟಕಗಳು ನಿರಾಸೆಯುಂಟು ಮಾಡಿದವು ಎಂದು ಬೇಸರದಿಂದಲೇ ಹೇಳುವೆ. ಇದಕ್ಕೆ ಕಲಾವಿದರು ಮಾತ್ರ ಕಾರಣರು ಎಂದು ಹೇಳುತ್ತಿಲ್ಲ. ಈ ಕುರಿತು ಅಲ್ಲಿನ ಪ್ರಾಂಶುಪಾಲರಾದ ಎಂ.ಗಣೇಶ್ ಮುಖ್ಯವಾಗಿ ಕೆ.ವಿ.ಅಕ್ಷರ ಅವರು ಗಮನ ಹರಿಸಬೇಕೆಂದು ಕೋರುವೆ.

ನೀನಾಸಂ ಕಲಾವಿದರಾಗಿದ್ದ, ತಿರುಗಾಟದ ವ್ಯವಸ್ಥಾಪಕರಾಗಿದ್ದ ವಿ.ಡಿ.ಮಧುಸೂದನ್ ಅವರು ನಾಟ್ಯಲೇಖ ರಂಗಸಮೂಹ ಎಂಬ ಸಂಸ್ಥೆ ಕಟ್ಟಿಕೊಂಡು, ರಂಗವಲ್ಲಿ ತಂಡದ ಸಹಯೋಗದಲ್ಲಿ ಮೈಸೂರಿನಲ್ಲಿ ಕಳೆದ ವಾರ ನೀನಾಸಂ ತಿರುಗಾಟದ ಎರಡು ನಾಟಕಗಳನ್ನು ಪ್ರದರ್ಶಿಸಿದಾಗ ಥಟ್ಟನೆ ಅನ್ನಿಸಿದ್ದು ಮೇಲಿನಂತೆ. ನೀನಾಸಂನ ಪರಿಚಯ ಪತ್ರದಲ್ಲಿ ‘ಹೊಸ ಪ್ರಯೋಗಗಳ ಮೂಲಕ ಹಳೆಯ ನಾಟಕಗಳ ಪುನರ್‌ಮೌಲ್ಯಮಾಪನವಾಗುವಂತೆ ಪ್ರಯತ್ನಿಸುವುದು’ ಎಂದಿದೆ. ಹೀಗೆಂದು ಚಂದ್ರಶೇಖರ ಕಂಬಾರ ಅವರ ‘ಹುಲಿಯ ನೆರಳು’ ನಾಟಕವನ್ನು ಆಯ್ದುಕೊಂಡಿರಬಹುದು. ಈಗಾಗಲೇ ಹಲವಾರು ತಂಡಗಳು ಆಡಿರುವ ಈ ನಾಟಕವು ‘ಈಡಿಪಸ್ ಕಾಂಪ್ಲೆಕ್ಸ್’ ಕುರಿತು ಹೇಳುತ್ತದೆ.

ಇನ್ನೊಂದು ನಾಟಕ; ‘ಆ ಲಯ ಈ ಲಯ’. ಒಂದುಮುಕ್ಕಾಲು ಗಂಟೆಯ ಈ ನಾಟಕದ ಆರಂಭದಲ್ಲಿ ಹೋರಾಟದ ಕಿಚ್ಚಿನ ಹಾಡು, ಮಾತು, ಭಾಷಣ ಇವೆ. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಪರಿಣಾಮಕಾರಿಯಾಗಿ ಬಂದಿವೆ. ತೆರೆಯ ಮುಂದೆ ಪೊಲೀಸರು, ತೆರೆಯ ಹಿಂದೆ ಪ್ರತಿಭಟನಾಕಾರರು. ಅವರ ನೆರಳು-ಬೆಳಕಿನಡಿಯ ದೃಶ್ಯಗಳು ಗಮನ ಸೆಳೆಯುತ್ತವೆ. ಈ ದೃಶ್ಯಗಳ ನಂತರ ಸ್ಟೂಡೆಂಟ್ಸ್ ಕ್ಲಬ್‌ನಲ್ಲಿ ನಡೆಯುವ ದೃಶ್ಯಗಳು; ಕುಡಿತ, ಪ್ರಣಯ, ಮೋಜುಮಸ್ತಿಯಿಂದಾಗಿ ನಾಟಕವು ಏನನ್ನು ಕಟ್ಟಿಕೊಡುತ್ತದೆ ಎನ್ನುವುದು ಮುಖ್ಯ. ಏಕೆಂದರೆ ಪ್ರತಿಭಟನೆಯ ನಂತರ ಕುಡಿತ ಸಾಮಾನ್ಯ ಎನ್ನುವುದನ್ನು ಬಿಂಬಿಸಲು ನಾಟಕ ಹೊರಟಂತಿದೆ. ಈಮೂಲಕ ಈ ನಾಟಕ ನೋಡುವ ಯುವತಲೆಮಾರು ಇದೇ ಬಗೆಯಾಗಿ ಸ್ಟೂಡೆಂಟ್ಸ್ ಕ್ಲಬ್ ಇರಬೇಕು ಎಂದು ತಿಳಿದಾರು. ಕುಡಿತದ ದೃಶ್ಯದಲ್ಲಿ ತಿರುಗಾಟದ ವ್ಯವಸ್ಥಾಪಕ ಮಂಜುನಾಥ ಹಿರೇಮಠ ಅವರು ತಮ್ಮ ಮ್ಯಾನರಿಸಂನಿಂದ ನೆನಪಲ್ಲಿ ಉಳಿಯುತ್ತಾರೆ. ಆದರೆ ಸಂಭಾಷಣೆ ನಡೆದಿರುವಾಗಲೇ ಇತರ ಕಲಾವಿದರ ಚಟುವಟಿಕೆಗಳೇ ಹೆಚ್ಚು ಗಮನಸೆಳೆಯುತ್ತವೆ. ಇದರಿಂದ ಮಾತನಾಡುವ ಕಲಾವಿದರತ್ತ ಲಕ್ಷ್ಯ ವಹಿಸಬೇಕೇ? ಮಾತನಾಡದಿರುವ ಕಲಾವಿದರತ್ತ ಗಮನ ಹರಿಸಬೇಕೇ ಎಂಬ ಗೊಂದಲ ಮೂಡುತ್ತದೆ.

ಮೈಸೂರು ರಂಗಾಯಣ ಪ್ರಸ್ತುತಪಡಿಸುವ ‘ಗಾಂಧಿ ವರ್ಸಸ್ ಗಾಂಧಿ’ ನಾಟಕದ ಮೊದಲ ದೃಶ್ಯದಲ್ಲಿ ಗಾಂಧಿ ಹಾಗೂ ಅವರ ಮಗ ಹರಿಲಾಲ್ ಸ್ವರ್ಗದಲ್ಲಿ ಭೇಟಿಯಾಗುತ್ತಾರೆ. ಆಗ ಗಾಂಧಿ ‘ನಿನ್ನ ಯೌವನವನ್ನು ಹೀಗೆ ಗಾಳಿಗೆ ತೂರಿಬಿಡಬೇಡವೆಂದು ಹೇಳಿದ್ದೆ’ ಎಂದು ಸ್ಮರಿಸಿಕೊಳ್ಳುತ್ತಾರೆ. ಇದನ್ನೇ ಈ ಬಾರಿಯ ತಿರುಗಾಟದ ಕಲಾವಿದರಿಗೆ ಅನ್ವಯಿಸಿ ಹೇಳುವುದಾದರೆ, ನಿಮ್ಮ ಯೌವನವನ್ನು ಅಂದರೆ ಎನರ್ಜಿಯನ್ನು ಸದುಪಯೋಗಪಡಿಸಿಕೊಳ್ಳಿ ಅಂದರೆ ಕೇವಲ ಮಾತಿನ ಓಘ, ಅಬ್ಬರದ ನಡುವೆ ಕಳೆದುಹೋಗದಿರಿ ಎಂದು. ಸದ್ದುಗದ್ದಲದ ನಡುವೆ ಕೇಳದ ಮಾತುಗಳೇ ಹೆಚ್ಚಾಗುವ ಬದಲು ಸಮಾಧಾನದಿಂದ ಮಾತುಗಳನ್ನು ಆಡಿರಿ. ಮೌನವೂ ಪ್ರತಿಭಟನೆ.

ನಾಟಕ: ಆ ಲಯ ಈ ಲಯ

ಮೂಲ: ಲೂಯಿ ನಕೋಸಿ

ಕನ್ನಡಕ್ಕೆ: ನಟರಾಜ ಹೊನ್ನವಳ್ಳಿ

ನಿರ್ದೇಶನ: ಎಚ್.ಕೆ. ಶ್ವೇತಾರಾಣಿ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಗಣೇಶ ಅಮೀನಗಡ

contributor

Similar News