ಸಕಲೇಶಪುರ ಮೂಕನಮನೆ ಜಲಪಾತ

ಮೂಕನಮನೆ ಜಲಪಾತವು ಆಕರ್ಷಕ ಪ್ರವಾಸಿ ತಾಣವಾಗಲು ಎಲ್ಲ ಗುಣಗಳನ್ನು ಹೊಂದಿದ್ದರೂ, ಸರಿಯಾದ ಸೌಲಭ್ಯಗಳಿಲ್ಲದೆ ಪ್ರವಾಸಿಗರು ಬೇಸರಗೊಂಡು ಹಿಂತಿರುಗುವ ಪರಿಸ್ಥಿತಿ ಉಂಟಾಗಿದೆ. ಸರಕಾರ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸಿದರೆ, ಇದು ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾಗಬಹುದು.

Update: 2024-10-28 06:49 GMT

ಹಾಸನ: ಸಕಲೇಶಪುರ ತಾಲೂಕಿನಲ್ಲಿರುವ ಮೂಕನಮನೆ ಜಲಪಾತ ಪ್ರವಾಸಿಗರನ್ನು ಆಕರ್ಷಿಸುತ್ತಿರುವುದು ಸತ್ಯವಾದರೂ, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪ್ರವಾಸಿಗರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಮಳೆಗಾಲದಲ್ಲಿ ಆಕಾಶವನ್ನೇ ಸೀಳಿಕೊಂಡು ಭೂಮಿಗೆ ಬರುವಂತೆ ಹೊಮ್ಮುವ ಈ ಜಲಪಾತವನ್ನು ಕಣ್ಣಾರೆ ನೋಡುವುದು ರೋಮಾಂಚಕ ಅನುಭವವೇ ಸರಿ, ಆದರೆ ಪ್ರವಾಸಿಗರಿಗೆ ಆನಂದಿಸಲು ಅನುಕೂಲಕರ ಪರಿಸ್ಥಿತಿ ಇಲ್ಲಿ ಇಲ್ಲ.

ಹದಗೆಟ್ಟ ದಾರಿ: ಸಕಲೇಶಪುರದಿಂದ 35 ಕಿಲೋಮೀಟರ್ ದೂರ ದಲ್ಲಿರುವ ಈ ಜಲಪಾ ತದತ್ತ ಹೋಗುವುದು ತೀರ ಕಷ್ಟಕರವಾಗಿದೆ. ವಿಶೇಷವಾಗಿ ಹಿರಿಯರು ಮತ್ತು ಮಕ್ಕಳಿಗೆ ಇಲ್ಲಿಗೆ ತಲುಪುವುದು ದುಸ್ಸಾಹಸವಾಗಿದೆ. ಮಳೆಗಾಲದಲ್ಲಿ ರಸ್ತೆಗಳು ಮಣ್ಣು ಕುಸಿತದಿಂದ ಸಂಪೂರ್ಣ ಹಾಳಾಗಿದ್ದು, ಪ್ರವಾಸಿಗರು ದೂರದಿಂದಲೇ ಜಲಪಾತವನ್ನು ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಚ್ಚರ ತಪ್ಪಿದರೆ ಅಪಾಯಕ್ಕೆ ಈಡಾಗುವ ಸ್ಥಿತಿ ಉಂಟಾಗಿದೆ.

 ಸೌಲಭ್ಯಗಳ ಕೊರತೆ: ಅಕ್ಕಪಕ್ಕದ ಪ್ರವಾಸಿ ತಾಣಗಳಂತೆ, ಇಲ್ಲಿಯೂ ಪ್ರವಾಸಿಗರಿಗೆ ಬೇಕಾದ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಕುಡಿಯುವ ನೀರು, ಶೌಚಾಲಯ, ತಂಗುವ ವ್ಯವಸ್ಥೆ ಮೊದಲಾದವುಗಳಲ್ಲದೇ, ಸುರಕ್ಷತೆಗೆ ಸಂಬಂಧಿಸಿದ ಮುನ್ನೆಚ್ಚರಿಕೆಗಳು ಕೂಡ ಇಲ್ಲ. ಶೌಚಾಲಯ ವ್ಯವಸ್ಥೆಯ ಕೊರತೆಯೂ ಮಹಿಳಾ ಪ್ರವಾಸಿಗರಿಗೆ ದೊಡ್ಡ ಸಮಸ್ಯೆಯಾಗಿದೆ.

ಅಡಚಣೆಗಳು ಮತ್ತು ನಿರ್ಲಕ್ಷ್ಯ: ಕಳೆದ ಕೆಲವು ವರ್ಷಗಳಿಂದ ಇಲ್ಲಿ ಕೆಲವೊಂದು ಕೊಠಡಿಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಪ್ರವಾಸಿಗರಿಗೆ ಕೊಠಡಿಗಳು, ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸ ಸಹಾಯಕ ಫಲಕಗಳು ಇನ್ನಷ್ಟು ಸುಧಾರಣೆಗಳನ್ನು ಮಾಡಬೇಕಾದರೂ, ಕಾಮಗಾರಿ ಇನ್ನೂ ಪೂರ್ಣಗೊಳ್ಳಲಿಲ್ಲ. ಜನಪ್ರತಿನಿಧಿಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯದಿಂದ ಯೋಜನೆಗಳು ಸ್ಥಗಿತಗೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮಲ್ನಾಡ್ ಮೆಹಬೂಬ್

contributor

Similar News