ಹೃದಯ ಆರೋಗ್ಯಕ್ಕೆ ಸ್ಟ್ರಾಬೆರ್ರಿ ಸಹಕಾರಿಯೇ? ಇಲ್ಲಿದೆ ಉಪಯುಕ್ತ ಮಾಹಿತಿ

Update: 2023-08-02 14:43 GMT

ಸಾಂದರ್ಭಿಕ ಚಿತ್ರ .| photo : NDTV

ಆಕರ್ಷಕ ಕೆಂಪು ಬಣ್ಣ ಹಾಗೂ ಉಲ್ಲಾಸದಾಯಕ ಸವಿಯೊಂದಿಗೆ ಗಮನ ಸೆಳೆಯುವ ಸ್ಟ್ರಾಬೆರ್ರಿ, ಹಣ್ಣುಪ್ರಿಯರಿಗೆ ಅಚ್ಚುಮೆಚ್ಚು. ಇದರ ಅಪೂರ್ವ ಸವಿ ಮತ್ತು ಆಕರ್ಷಕ ನೋಟದ ಜತೆಗೆ, ನಮ್ಮ ದೈನಂದಿನ ಆಹಾರಕ್ರಮದಲ್ಲಿ ಇದನ್ನು ಸೇರಿಸಿಕೊಳ್ಳುವುದು ಹೃದಯ ಮತ್ತು ಮೆದುಳಿನ ಆರೋಗ್ಯಕ್ಕೆ ಉತ್ತಮ ಎನ್ನುವುದನ್ನು ಸಂಶೋಧನೆಗಳು ದೃಢಪಡಿಸಿವೆ. ಅಗತ್ಯ ಪೌಷ್ಟಿಕಾಂಶಗಳು ಮತ್ತು ಶಕ್ತಿಶಾಲಿ ಪ್ರತಿವಿಷ ಲಕ್ಷಣದಿಂದ ಕೂಡಿರುವ ಈ ಬೆರ್ರಿಹಣ್ಣು, ನಮ್ಮ ಹೃದ್ಯ ಸಂಬಂಧಿ ಹಾಗೂ ಹೃದಯನಾಳದ ಕಾರ್ಯಾಚರಣೆಯನ್ನು ಬೆಂಬಲಿಸುವ ನೈಸರ್ಗಿಕ ಪರಿಹಾರ ಎನಿಸಿಕೊಂಡಿದೆ.

ದೈನಂದಿನ ಆಹಾರದಲ್ಲಿ ಎರಡು ಸ್ಟ್ರಾಬೆರ್ರಿಗಳನ್ನು ಬಳಸುವುದು ನಮ್ಮ ಅರಿವು ಸಂಬಂಧಿ ಅಂಶಗಳ ಸುಧಾರಣೆಗೂ ಸಹಕಾರಿ ಎಂದು ಸ್ಯಾನ್ ಡಿಯಾಗೊ ಸ್ಟೇಟ್ ಯುನಿವರ್ಸಿಟಿಯ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ರಕ್ತದ ಒತ್ತಡ ಕಡಿಮೆ ಮಾಡಲು, ದೇಹದ ವಿಷಕಾರಿ ಅಂಶಗಳನ್ನು ನಿರ್ಮೂಲನೆ ಮಾಡುವ ಮೂಲಕ ದೇಹಾರೋಗ್ಯ ಹೆಚ್ಚಿಸಲೂ ಇದು ಪೂರಕ. ಈ ಸಂಶೋಧನೆಗೆ 65 ರಿಂದ 78 ವರ್ಷ ವಯಸ್ಸಿನ 35 ಮಂದಿ ಆರೋಗ್ಯವಂತರನ್ನು ಆಯ್ಕೆ ಮಾಡಲಾಗಿತ್ತು. ಪ್ರತಿ ದಿನ ಎಂಟು ವಾರಗಳ ಕಾಲ ಎಲ್ಲರಿಗೂ 26 ಗ್ರಾಂ ಸ್ಟ್ರಾಬೆರ್ರಿ ಪುಡಿ ನೀಡಲಾಯಿತು. ಎಂಟು ವಾರಗಳ ಕೊನೆಗೆ ಕಂಡುಬಂದ ಫಲಿತಾಂಶದ ಪ್ರಕಾರ, ಇವರ ಅರಿವಿನ ಪ್ರಕ್ರಿಯೆ ಶೇಕಡ 5.2ರಷ್ಟು ಸುಧಾರಣೆಯಾಗಿದ್ದು, ರಕ್ತದ ಒತ್ತಡ ಶೇಕಡ 3.6ರಷ್ಟು ಕಡಿಮೆಯಾಗಿದೆ ಹಾಗೂ ಪ್ರತಿವಿಷ ಸಾಮಥ್ರ್ಯ ಶೇಕಡ 10.2ರಷ್ಟು ಹೆಚ್ಚಿದೆ.

ಜತೆಗೆ ಇದು ನರಮಂಡಲದ ರಕ್ಷಣೆಗೆ ಹಾಗೂ ಹೃದಯ ಮತ್ತು ಮೆದುಳಿಗೂ ಉತ್ತೇಜಕವಾಗಿ ಕೆಲಸ ಮಾಡುತ್ತದೆ ಎಂದು ಅಧ್ಯಯನ ದೃಢಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News